Advertisement

ಬಿರ್ಭೂಮ್ ಹಿಂಸಾಚಾರದಲ್ಲಿ ಪುಟ್ಟ ಮಕ್ಕಳೂ ಬಲಿ : ಟಿಎಂಸಿ ಉಗ್ರವಾದ ಎಂದ ಬಿಜೆಪಿ

12:32 PM Mar 23, 2022 | Team Udayavani |

ಕೋಲ್ಕತಾ: ಬಿರ್ಭೂಮ್ ಹಿಂಸಾಚಾರ ಘಟನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದು, ಬಿಜೆಪಿ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ನೀಡಿದೆ.

Advertisement

ಹಿಂಸಾಚಾರದಲ್ಲಿ ಒಟ್ಟು 10 ಮಂದಿ ಬಲಿಯಾಗಿದ್ದು, ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆಯುವ ಹಿಂಸಾಚಾರ ಮುಂದುವರೆದಿದ್ದು, ಕಾನೂನು ಸುವ್ಯಯಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು 9  ಮಂದಿ ಸಂಸದರ ನಿಯೋಗ ದೋರು ನೀಡಿದೆ. ಇನ್ನೊಂದೆಡೆ ಮಕ್ಕಳ ಹಕ್ಕುಗಳ ಆಯೋಗವು ಘಟನೆಯ ಕುರಿತು ಪಶ್ಚಿಮ ಬಂಗಾಳ ಪೊಲೀಸರಿಂದ ಕ್ರಮ ಕೈಗೊಂಡ ಕುರಿತಾಗಿ ವರದಿಯನ್ನು ಕೇಳಿದೆ. ಕೇಂದ್ರ ಗೃಹ ಇಲಾಖೆಯೂ ಪಶ್ಚಿಮ ಬಂಗಾಳ ಸರಕಾರದಿಂದ ವರದಿಯನ್ನು ಕೇಳಿದೆ.

ನಾವು ಯಾವುದೇ ಕಾರಣಕ್ಕೂ ಬಂಗಾಳದಲ್ಲಿ ರಾಜಕೀಯ ಉಗ್ರವಾದ ಮುಂದುವರಿಯಲು ಬಿಡುವುದಿಲ್ಲ, ಕೇಂದ್ರ ಗ್ರಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದರ ನಿಯೋಗ ಮನವಿ ಮಾಡಿದೆ.

2021 ರ ವಿಧಾನಸಭೆ ಚುನಾವಣೆಯ ಬಳಿಕ ಬಂಗಾಳದಲ್ಲಿ 50 ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಎಲ್ಲವನ್ನೂ ಟಿಎಂಸಿ ಮಾಡಿಸಿದ್ದು, ಕುಕೃತ್ಯಗಳು ಮುಂದುವರೆದು ಬಿಜೆಪಿ ಸಂಸದರೊಬ್ಬರ ಹತ್ಯೆಗೂ ಯತ್ನ ನಡೆದಿದೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.

ಘಟನೆಯ ನಂತರ, ಸ್ಥಳೀಯ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ. “ನಾವು ಭದ್ರತೆಯ ದೃಷ್ಟಿಯಿಂದ ಮನೆಗಳನ್ನು ತೊರೆಯುತ್ತಿದ್ದೇವೆ. ಘಟನೆಯಲ್ಲಿ ನನ್ನ ಸೋದರಮಾವ ಸಾವನ್ನಪ್ಪಿದ್ದಾರೆ. ಪೊಲೀಸ್ ಭದ್ರತೆ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ.” ಎಂದು ಗ್ರಾಮಸ್ಥರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ನಮಗೆ ನಾಚಿಕೆಯಾಗುತ್ತಿದೆ. ಅಮಾಯಕರು, ಮಕ್ಕಳು ಸಜೀವ ದಹನವಾಗಿದ್ದಾರೆ, ಜನರು ಹಳ್ಳಿಯನ್ನು ತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಸರ್ಕಾರ ಏನು ಮಾಡುತ್ತಿದೆ? ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಸಂಸದ ದಿಲೀಪ್ ಘೋಷ್ ಕಿಡಿ ಕಾರಿದ್ದಾರೆ.

ಟಿಎಂಸಿ ಗೆ ಸೇರಿದ ಪಂಚಾಯತ್ ಉಪಾಧ್ಯಕ್ಷರನ್ನು ಬಾಂಬ್ ದಾಳಿ ನಡೆಸಿ ಹತ್ಯೆಗೈದ ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಹತ್ತು ಮಂದಿ ಸಜೀವವಾಗಿ ದಹನವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next