Advertisement

ಮಕ್ಕಳ ಬಾಯಿ ನೀರೂರಿಸಿದ ಫ್ರುಟ್ ಸಲಾಡ್ ಡೇ!

09:49 AM Aug 03, 2019 | Team Udayavani |

ಕುಂದಾಪುರ: ತಿನ್ನೋಕೆ ಸೂಪರ್ರಾಗಿದೆ.. ಆಹಾ ಇನ್ನೂ ಬೇಕು.. ಅಂತ ಮಕ್ಕಳ ಬಾಯಲ್ಲಿ ನೀರೂರಿಸುವಂತೆ ಮಾಡಿದ್ದೂ ಅಲ್ಲದೆ ಫ್ರುಟ್ ಸಲಾಡ್ ಮಾಡಿ ತಿಂದಿದ್ದು, ಇಲ್ಲಿನ ಎಚ್.ಎಮ್.ಎಮ್. ಆಂಗ್ಲಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು.

Advertisement

ವಿವಿಧ ಹಣ್ಣುಗಳ ಪರಿಚಯ, ಬಳಕೆ, ಉಪಯೋಗಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಲು ಈ ಆಚರಣೆಯನ್ನು ಆಯೋಜಿಸಲಾಗಿತ್ತು. ವಿವಿಧ ಹಣ್ಣುಗಳನ್ನು ಬಳಸಿ ಫ್ರುಟ್ ಸಲಾಡ್ ತಯಾರಿಸಿ ಮಕ್ಕಳಿಗೆ ವಿತರಿಸಲಾಯಿತು. ಮಕ್ಕಳೂ ಖುಷಿಯಿಂದಲೇ ಫ್ರುಟ್ ಸಲಾಡ್ ತಿಂದರು.

ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲತಾ ಜಿ. ಭಟ್, ಶಿಕ್ಷಕಿ ಜ್ಯೋತಿ ಇವರ ಸಂಯೋಜನೆಯಲ್ಲಿ ಈ ವಿಭಿನ್ನ ಕಾರ್ಯಕ್ರಮ ಖುಷಿ ಖುಷಿಯಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next