Advertisement
ಸುಮಾರು 10-20 ವರ್ಷ ಮೇಲ್ಪಟ್ಟಿರುವ ಫಸಲು ಭರಿತ ತೆಂಗಿನ ಮರಗಳಲ್ಲೂ ಈ ಸಮಸ್ಯೆ ಬಾಧಿಸುತ್ತಿದೆ. ಆರಂಭದಲ್ಲಿ ಸಿರಿ (ಚಿಗುರು) ಒಣಗಿ, ಹೊಸ ಚಿಗುರು ಬರುವುದು ನಿಲ್ಲುತ್ತದೆ. ಬಳಿಕದಲ್ಲಿ ಎಳೆ ಕಾಯಿಗಳು ಉದುರುತ್ತವೆ. ಈ ರೋಗ ಬಾಧೆ ಒಮ್ಮೆಗೇ ಗಮನಕ್ಕೆ ಬರುವುದಿಲ್ಲ; ಆದ್ದರಿಂದ ಗಮನಕ್ಕೆ ಬಂದ ಬಳಿಕ ಮರವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಕೃಷಿಕರು ತಿಳಿಸುತ್ತಾರೆ. ಎಷ್ಟೋ ವರ್ಷಗಳಿಂದ ಸಾಕಿ ಬೆಳೆಸಿದ ಫಸಲು ಭರಿತ ಮರಗಳು ಈ ರೀತಿ ಸಾಯುವಾಗ ಕೃಷಿಕರು ನಷ್ಟಕ್ಕೊಳಗಾಗುವುದರ ಜತೆಗೆ ತಮ್ಮ ವರನ್ನೇ ಕಳೆದುಕೊಂಡಷ್ಟು ಸಂಕಟ ಪಡುತ್ತಿದ್ದಾರೆ.
ಮರಗಳು ಸಾಯುತ್ತಿರುವ ಲಕ್ಷಣ ಗಮನಿಸಿದರೆ, ಮೇಲ್ನೋಟಕ್ಕೆ ಇದು ಸುಳಿ ಕೊಳೆ ರೋಗ ಆಗಿರ ಬಹುದು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಗಾಳಿಯಿಂದ ಇದು ಹರಡುತ್ತದೆ. ತೆಂಗಿನ ಮರ ಹತ್ತಿ ಅಲ್ಲಿನ ಭಾಗವನ್ನು ತೆಗೆದು ಪರಿಶೀಲಿಸಿದರೆ ಸ್ಪಷ್ಟತೆ ಸಿಗಬಹುದು. ಮಳೆ ಹೆಚ್ಚಾದ ಸಂದರ್ಭದಲ್ಲಿ ಈ ಸುಳಿ ಕೊಳೆ ರೋಗ ತೆಂಗನ್ನು ಬಾಧಿಸುತ್ತದೆ. ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಹಾಗೂ ರಾಜ್ಯದ ಕೆಲವೆಡೆ ಇದು ಕಾಣಿಸಿಕೊಂಡಿತ್ತು. ಹುಳ (ಕೀಟ) ಬಾಧೆಯಿಂದಲೂ ಈ ರೀತಿ ಆಗುವ ಸಂಭವವಿರುತ್ತದೆ. ಹುಳ ಬಾಧೆಯನ್ನು ಕೃಷಿಕರೇ ಎಚ್ಚರ ವಹಿಸಿ ನಿಯಂತ್ರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಕಾಣಿಸಿಕೊಂಡಿರುವುದು ಸುಳಿಕೊಳೆ ರೋಗ ಎಂದಾದರೆ ನಿಯಂತ್ರಣ ಸಾಧ್ಯವಿದೆ ಎಂದು ತೋಟಗಾರಿಕಾ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
Advertisement
ಎರಡನೇ ಹಂತವಾಗಿ ತುದಿಯ ಗರಿಯು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗಲೂ ಗರಿಗಳೂ ಕೊಳೆಯುತ್ತವೆ. ರೋಗ ತೀವ್ರಗೊಂಡಲ್ಲಿ ಗಿಡವು ಸಂಪೂರ್ಣ ಒಣಗುವ ಸಂಭವವಿರುತ್ತದೆ. ಪರಿಶೀಲಿಸಿ ಔಷಧ ಸಿಂಪಡಣೆ, ಬೇವಿನ ಹಿಂಡಿ ಹಾಕಬೇಕು. ಅಕ್ಕ ಪಕ್ಕದ ತೆಂಗುಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಅವುಗಳಿಗೆ ಪೂರಕ ಔಷಧ ಸಿಂಪಡಿಸುವುದು ಮೊದಲಾದ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.
ತೆಂಗಿನ ಕೊಳೆತ ಸಿರಿಗಳನ್ನುತೆಗೆದು ಅಲ್ಲಿಗೆ ಬೋಡೋì ಪೇಸ್ಟ್ ಹಚ್ಚcಬೇಕು. ಚಿಗುರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದಲ್ಲಿ ತೆಂಗನ್ನು ಬದುಕಿಬಹುದು ಎನ್ನುತ್ತಾರೆ ಸಿಪಿಸಿಆರ್‌ಐ ಅಧಿಕಾರಿಗಳು.
ಕೀಟ ಬಾಧೆ, ಸುಳಿ ಕೊಳೆ ರೋಗದಿಂದ ತೆಂಗುಗಳು ಸಾಯುತ್ತವೆ. ಕೀಟ ಬಾಧೆ ಸಾಮಾನ್ಯ ರೋಗವಾಗಿದ್ದು, ಕೃಷಿಕರು ಎಚ್ಚರ ವಹಿಸಿದಲ್ಲಿ ನಿಯಂತ್ರಣ ಸಾಧ್ಯ. ಬಾಧಿತ ಮರಗಳಿಂದ ಇತರೆ ಮರಗಳಿಗೆ ಹರಡದಂತೆ ಮುನ್ನೆಚ್ಚರಿಗೆ ವಹಿಸುವುದು ಅಗತ್ಯ.– ದಿವಾಕರ,
ವಿಜ್ಞಾನಿ ಸಿಪಿಸಿಆರ್‌ಐ
ಕಿದು ನೆಟ್ಟಣ -ದಯಾನಂದ ಕಲ್ನಾರ್