Advertisement

ಸಂಚಾರಿ ವಾಹನದಲ್ಲಿ ಹಣ್ಣು-ತರಕಾರಿ ಮಾರಾಟ

04:08 PM Apr 06, 2020 | Suhan S |

ಚಿಕ್ಕಮಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಮತ್ತು ಗ್ರಾಹಕರ ಹಿತ ಕಾಯುವ ಉದ್ದೇಶದಿಂದ ನಗರದಲ್ಲಿ ಹಣ್ಣು-ತರಕಾರಿ ಮಾರಾಟದ ಸಂಚಾರಿ ವಾಹನ ಭಾನುವಾರದಿಂದ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಸಿ.ಟಿ.ರವಿ ಹೇಳಿದರು.

Advertisement

ಭಾನುವಾರ ನಗರದ ನಗರದ ಸಂತೆ ಮೈದಾನದಲ್ಲಿರುವ ನೂತನ ಇಲಾಖಾ ಮಳಿಗೆ ಮತ್ತು ಸಂಚಾರಿ ಮಾರಾಟ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ 19 ವೈರಸ್‌ ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರಿಂದಾಗಿ ರೈತರು, ಗ್ರಾಹಕರು ಸಂಕಷ್ಟ ಎದುರಾಗಿತ್ತು. ಇದೀಗ ಮೊಬೈಲ್‌ ವಾಹನದ ಮೂಲಕ ಜಿಲ್ಲೆಯ ನಾಗರಿಕರಿಗೆ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸುಲಭವಾಗಿ ಮನೆ ಬಾಗಿಲಿಗೇ ತಲುಪಿಸುವ ಕೆಲಸವಾಗುತ್ತಿದೆ ಎಂದರು.

ಹಾಪ್‌ಕಾಮ್ಸ್‌ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ರೈತರಿಂದ ನೇರವಾಗಿ ನ್ಯಾಯಯುತ ಬೆಲೆಗೆ ಕೊಂಡು ಗ್ರಾಹಕರಿಗೆ ಅನುಕೂಲಕ್ಕೆ ತಕ್ಕ ದರದಲ್ಲಿ ಮಾರಾಟ ಮಾಡಲಾಗುವುದು. ಇದರಿಂದಾಗಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿಯೂ ಇದು ಹೀಗೆಯೇ ಮುಂದುವರಿಯಲಿದ್ದು, ನಗರದ ಜನತೆ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಜಿಪಂ ಸದಸ್ಯ ಹಾಗೂ ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಸೋಮಶೇಖರ್‌, ಹಾಪ್‌ಕಾಮ್ಸ್‌ ನಿರ್ದೇಶಕ ರಾಮಚಂದ್ರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಚಂದ್ರಶೇಖರ್‌, ಹಾಪ್‌ಕಾಮ್ಸ್‌ ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಯು. ರಾಮಚಂದ್ರಪ್ಪ, ದೀಪಕ್‌ ದೊಡ್ಡಯ್ಯ, ಸಹಾಯಕ ತೋಟಗಾರಿಕೆ ನಿರ್ದೇಶಕ ಲೋಹಿತ್‌, ಅರುಣ್‌, ಸಂಜಯ್‌ ಉಪಸ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next