Advertisement
ಅಷ್ಟೇ ಅಲ್ಲದೆ ಸಾಗಣೆ ಶುಲ್ಕ ಪಡೆಯದೆ ಹಾಪ್ ಕಾಮ್ಸ್ ವಾಹನದಲ್ಲೇ ಗ್ರಾಹಕರ ಮನೆಗೆ ಹಣ್ಣು-ತರಕಾರಿ ತಲುಪಲಿದೆ. “ನೋ ಲಾಸ್ ನೋ ಪ್ರಾಫಿಟ್” ಸಂಕಲ್ಪದೊಂದಿಗೆ ಯೋಜನೆಯ ಕಾರ್ಯರೂಪಕ್ಕೆ ತರಲಾಗಿದ್ದು ತೋಟದ ಬೆಳೆಗಾರರು ಬೆಳೆದ ಉತ್ಪನ್ನಗಳಿಗೆ ಉತ್ತಮ ದರ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಿದೆ. ಶುಭ ಸಮಾರಂಭಗಳಿಗೆ ಅಗತ್ಯವಿರುವ ಹಣ್ಣುತರಕಾರಿ ಹಾಗೂ ಹಾಪ್‌ಕಾಮ್ಸ್‌ನಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಗಳು ತಿಳಿಸುತ್ತಾರೆ.
Related Articles
Advertisement
ಯಾವುದೇ ರೀತಿಯ ಲಾಭಾಂಶದ ಉದ್ದೇಶವಿಲ್ಲದೆ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಗ್ರಾಹಕರು ಬಯಸಿದರೆಬೆಂಗಳೂರು ಗ್ರಾಮಾಂತರ ವರೆಗೂ ರಿಯಾಯ್ತಿ ದರದಲ್ಲಿ ಸೇವೆಯನ್ನು ಮನೆ ಬಾಗಿಲಿಗೆ ಕಲ್ಪಿಸಲು ಹಾಪ್ ಕಾಮ್ಸ್ ಸಿದ್ಧವಿದೆ ಎಂದು ತಿಳಿಸುತ್ತಾರೆ.
25 ಕಿ.ಮೀ. ಆಸುಪಾಸಿನಲ್ಲಿ ಮಾರಾಟ :
ಸಮಾರಂಭಗಳಿಗೆ 20 ಸಾವಿರ ರೂ.ಗೂ ಮೇಲ್ಪಟ್ಟು ಖರೀದಿಸುವವರಿಗೆ ಮಾತ್ರ ಉಚಿತವಾಗಿ ವಾಹನಗಳ ಮೂಲಕ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದು. ಅಡುಗೆ ಎಣ್ಣೆ ಹೊರತು ಪಡಿಸಿ ಕುಡಿಯುವ ನೀರು, ಹಣ್ಣು, ತರಕಾರಿ ಸೇರಿದಂತೆ ಹಾಪ್‌ಕಾಮ್ಸ್‌ನಲ್ಲಿ ಲಭ್ಯ ಇರುವಉತ್ಪನ್ನಗಳಿಗೆ ರಿಯಾಯಿತಿ ದೊರೆಯಲಿದೆ. ಈಗ ಬೆಂಗಳೂರಿನ 25 ಕಿ.ಮೀ ಆಸುಪಾಸಿನಲ್ಲಿಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಅಧಿಕ ಪ್ರಮಾಣದಲ್ಲಿ ಖರೀದಿ ಪ್ರಕ್ರಿಯೆ ನಡೆದರೆ ಬೆಂಗಳೂರಿನಹೊರ ವಲಯಗಳಿಗೂ ಕೂಡ ಉಚಿತ ವಾಹನ ಸೇವೆ ನೀಡಲಾಗುತ್ತಿದೆ. ಮನೆಗೆ ಉತ್ಪನ್ನಗಳನ್ನು ತಲುಪಿದ ನಂತರ ಪೂರ್ಣ ಪ್ರಮಾಣದಲ್ಲಿ ಖರೀದಿದಾರರು ಬಿಲ್ ಪಾವತಿ ಮಾಡುವ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಪ್ ಕಾಮ್ಸ್‌ಹಲವು ಯೋಜನೆಗಳನ್ನು ರೂಪಿಸಿದೆ.ಇದರಲ್ಲಿ ಶುಭ ಸಮಾರಂಭಗಳಿಗೆರಿಯಾಯಿತಿ ದರದಲ್ಲಿ ಮಾರಾಟ ಮತ್ತುಮನೆ ಬಾಗಿಲಿಗೆ ಉಚಿತವಾಗಿ ಖರೀದಿ ಉತ್ಪನ್ನಗಳನ್ನು ತಲುಪಿಸುವ ಸೇವೆ ಕೂಡ ಸೇರಿದೆ. ನೋ ಲಾಸ್ ನೋ ಪ್ರಾಫಿಟ್ ಕಲ್ಪನೆಯಡಿ ಯೋಜನೆ ರೂಪಿಸಲಾಗಿದ್ದು ಗ್ರಾಹರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.- ಉಮೇಶ್ ಎಸ್.ಮಿರ್ಜಿ , ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ
–ದೇವೇಶ ಸೂರಗುಪ್ಪ