Advertisement
ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ 6 ಜನ ಶಿಕ್ಷಕರು ಮತ್ತು 54 ವಿದ್ಯಾರ್ಥಿನಿಯರು ಪ್ರವಾಸಕ್ಕೆ ಬಂದಿದ್ದು, ಮಂಗಳವಾರ ಸಂಜೆ ಮುರುಡೇಶ್ವರದಲ್ಲಿ ಈಜಲೆಂದು ಸಮುದ್ರಕ್ಕೆ ಅಲೆಗಳ ಹೊಡೆತಕ್ಕೆ ಸಿಲುಕಿ 7 ಬಾಲಕಿಯರು ನಾಪತ್ತೆಯಾಗಿದ್ದರು. ಎಲ್ಲರ ಮೃತದೇಹಗಳು ಪತ್ತೆಯಾಗಿವೆ.
ಈ ನಡುವೆ ವಸತಿ ಶಾಲೆ ವಿದ್ಯಾರ್ಥಿಗಳು ಆಕಸ್ಮಿಕವಾಗಿ ಮೃತಪಟ್ಟರೆ ನೀಡುವ ಪರಿಹಾರವನ್ನು 4 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿದ್ದು, ಮೃತಪಟ್ಟಿರುವ ಎಲ್ಲ ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿ ಆದೇಶಿಸಿದ್ದಾರೆ. ಶಿಕ್ಷಕರ ವಿರುದ್ಧ ಪ್ರಕರಣ ದಾಖಲು
ಪ್ರಕರಣಕ್ಕೆ ಸಂಬಂಧಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯೋಪಾಧ್ಯಾಯಿನಿ ಶಶಿಕಲಾ ವೆಂಕಟೇಶ ಬಾಬು, ಅತಿಥಿ ಶಿಕ್ಷಕರಾದ ಗಣಿತ ಶಿಕ್ಷಕ ಸುನೀಲ ಆರ್. ರಾಮಕೃಷ್ಣಪ್ಪ, ಇಂಗ್ಲೀಷ್ ಶಿಕ್ಷಕ ಚೌಡಪ್ಪ ಎಸ್., ವಿಜ್ಞಾನ ಶಿಕ್ಷಕ ವಿಶ್ವನಾಥ ಎಸ್., ಕನ್ನಡ ಶಿಕ್ಷಕಿ ಶಾರದಮ್ಮ ಸಿ.ಎನ್. ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ನರೇಶ ಕೆ. ಇವರ ವಿರುದ್ಧ ಮುಡೇìಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.