Advertisement
ಶೇರುಗಳಲ್ಲಿ ಹಣ ಹೂಡಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕೆ ಮುಖ್ಯ ಕಾರಣ – ಶೇರುಗಳಲ್ಲಿ ಹಣ ಹೂಡಿದರೆ ರಾತ್ರಿ ಬೆಳಗಾಗುವುದರೊಳಗೆ ಸಿರಿವಂತರಾಗಲು ಸಾಧ್ಯ ಎಂಬ ಸರ್ವತ್ರ ನಂಬಿಕೆ ! ಆದರೆ ಇದು ನಿಜವೋ ಸುಳ್ಳೋ ಎಂಬುದನ್ನು ಅವರವರೇ ಅನುಭವ ಮತ್ತು ತಂತ್ರಗಾರಿಕೆಯಿಂದ ಪ್ರಮಾಣಿಸಿಕೊಳ್ಳಬೇಕಾಗುತ್ತದೆ.
Related Articles
Advertisement
ಅದಾದ ಬಳಿಕದ ಉಳಿತಾಯದ ಶೇ.35ರಷ್ಟು ಹಣವನ್ನು ಶೇರು ಹೂಡಿಕೆಗೆಂದು ಬಳಸಿಕೊಳ್ಳಬೇಕು. ಅದೇನಿದ್ದರೂ ಈ ಮೊತ್ತವನ್ನು ಪ್ರತೀ ತಿಂಗಳೆಂಬಂತೆ ತೆಗೆದಿಡಬೇಕು. ಅದು ಒಂದು ಹೂಡಿಕೆ ಯೋಗ್ಯ ಮೊತ್ತವಾಗಿ ಬೆಳೆದಾಗ ಅದನ್ನು ಶೇರು ಹೂಡಿಕೆಗೆ ಬಳಸಬೇಕು.ಆಗ ಮಾತ್ರವೇ ನಾವು ನಮ್ಮ ಕಾಲ ಮೇಲೆ ನಿಂತು, ಸ್ವಾವಲಂಬಿಗಳಾಗಿ, ಶೇರು ಹೂಡಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ.
ಶೇರುಗಳನ್ನು ನಾವು ಎರಡು ಮಾಧ್ಯಮಗಳ ಮೂಲಕ ಖರೀದಿಸಬಹುದು. ಮೊದಲನೇದು ಪ್ರೈಮರಿ ಮಾರ್ಕೆಟ್ ಮೂಲಕ. ಅದುವೇ ಐಪಿಓ ಮಾರ್ಗ – ಎಂದರೆ ಇನಿಶಿಯಲ್ ಪಬ್ಲಿಕ್ ಆಫರ್. ಹಾಲಿ ಕಂಪೆನಿಗಳು ಅಥವಾ ಹೊಸದಾಗಿ ಸ್ಥಾಪಿಸಲ್ಪಟ್ಟ ಕಂಪೆನಿಗಳು ವಿವಿಧ ಉದ್ದೇಶಗಳಿಗಾಗಿ ನಿರ್ದಿಷ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಂದ ಬಂಡವಾಳ ಎತ್ತಲು ಐಪಿಓ (ಸಾರ್ವಜನಿಕರಿಗೆ ಶೇರು ನೀಡುವ ಪ್ರಕ್ರಿಯೆ – Initial Public Offer) ಮೂಲಕ ಶೇರು ಮಾರುಕಟ್ಟೆಗೆ ಬರುತ್ತವೆ.
ಕಂಪೆನಿಗಳು ತಾವು ಸಾರ್ವಜನಿಕರಿಗೆ ಕೊಡಲು ಉದ್ದೇಶಿಸುವ ತಮ್ಮ ಶೇರುಗಳ ಮುಖ ಬೆಲೆ 10 ರೂ. ಇದ್ದರೆ ಅದಕ್ಕೆ ತಮ್ಮ ಕಂಪೆನಿಯ ಆರ್ಥಿಕ ಸಾಮರ್ಥ್ಯ, ಉಜ್ವಲ ಭವಿಷ್ಯ ಇತ್ಯಾದಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅದರ ಮೇಲೆ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುತ್ತವೆ. ಒಂದು ವೇಳೆ 100 ರೂ. ಪ್ರೀಮಿಯಂ ಇದ್ದಲ್ಲಿ ಐಪಿಓ ಶೇರು ಬೆಲೆ (10+100) 110 ರೂ. ಆಗತ್ತದೆ. ಆದರೆ ಕಂಪೆನಿಗಳು 105 ರೂ.ಗಳಿಂದ 110 ರೂ. ನಡುವೆ ಒಂದು ಬಿಡ್ಡಿಂಗ್ ರೇಂಜ್ ಸೆಟ್ ಮಾಡುತ್ತವೆ. ಸಾಮಾನ್ಯವಾಗಿ ಈ ರೇಂಜ್ ನ ಗರಿಷ್ಠ ಮೊತ್ತಕ್ಕೆ ಅರ್ಜಿ ಗುಜರಾಯಿಸುವಂತೆ ಮಾಡಲಾಗುತ್ತದೆ.
ಐಪಿಓಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅತ್ಯಧಿಕವಿರುತ್ತದೆ. ವಿಶೇಷವಾಗಿ ಹೂಡಿಕೆಗೆ ಹೊಸಬರಾಗಿರುವವರು ಐಪಿಓ ಮಾರ್ಗದ ಮೂಲಕ ಶೇರು ಪಡೆಯಲು ಮುಂದಾಗುತ್ತಾರೆ. ಅರ್ಜಿ ಹಾಕಿದ ಎಲ್ಲರಿಗೂ ಐಪಿಓ ಶೇರು ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕಿದರೂ ನಾವು ಕೇಳಿದಷ್ಟು ಶೇರುಗಳನ್ನು ಅವರು ಕೊಡುವುದಿಲ್ಲ. ಶೇರು ನೀಡಿಕೆಯನ್ನು ವಿವಿಧ ಪ್ರಮಾಣದ ಹೂಡಿಕೆಗೆ ಅನುಸಾರವಾಗಿ ಲಾಟರಿಯಲ್ಲಿ ನೀಡಲಾಗುತ್ತದೆ. ಐಪಿಓ ಶೇರು ಸಿಗದವರಿಗೆ ಅವರು ಪಾವತಿಸಿದ ಹಣ ಎರಡು ವಾರಗಳ ಒಳಗೆ ಮರುಪಾವತಿಯಾಗುತ್ತದೆ.
ಪ್ರೈಮರಿ ಮಾರ್ಕೆಟ್ ನಲ್ಲಿ ಐಪಿಓ ಮೂಲಕ ನೀಡಲಾಗುವ ಶೇರುಗಳ ಲಿಸ್ಟಿಂಗ್ ನಡೆದಾಗ ಅವುಗಳ ಮಾರುಕಟ್ಟೆ ಬೆಲೆಯಲ್ಲಿ ವಿಪರೀತ ಏರು ಪೇರುಗಳು ಆಗುವುದಿದೆ. ಪ್ರೀಮಿಯಂ ಸಹಿತವಾದ 100 ರೂ. ಇಶ್ಯೂ ಬೆಲೆಯ ಶೇರಿನ ಧಾರಣೆ ಲಿಸ್ಟಿಂಗ್ ದಿನ 150 -170 ರೂ. ಗಳಲ್ಲಿ ವಹಿವಾಟಾಗುವುದಿದೆ.
ದಿನಾಂತ್ಯಕ್ಕೆ ಅದು ಏಕಾಏಕಿ ಇಳಿದು ಇಶ್ಯೂ ಬೆಲೆಗೆ ಮರಳುವುದಿದೆ. ಇಶ್ಯೂ ಬೆಲೆಗಿಂತಲೂ ಕೆಳಗಿನ ಮಟ್ಟಕ್ಕೆ ಇಳಿಯುವ ಸಾಧ್ಯತೆಗಳೂ ಇರುತ್ತವೆ. ಆದು ಆಯಾ ಕಂಪೆನಿಗಳ ದೃಢತೆ, ಇತಿಹಾಸ, ಭವಿಷ್ಯ ಇತ್ಯಾದಿಗಳನ್ನು ಅವಲಂಭಿಸಿರುತ್ತದೆ. ಸಾಮಾನ್ಯ ಹೂಡಿಕೆದಾರರು ಈ ಏರಿಳಿತಗಳಿಗೆ ಸ್ಪಂದಿಸಬೇಕಾದ ಅಗತ್ಯವಿಲ್ಲ. ಕೇವಲ ವಹಿವಾಟುದಾರರಿಗೆ ಮಾತ್ರವೇ ಈ ಏರಿಳಿತಗಳ ಲಾಭ – ನಷ್ಟವನ್ನು ತಾಳಿಕೊಳ್ಳಲು ಸಾಧ್ಯವಿರುತ್ತದೆ.
ಹೊಸದಾಗಿ ಪಬ್ಲಿಕ್ ಇಶ್ಯೂ ಮಾಡಿದ ಕಂಪೆನಿಯ ಶೇರುಗಳು ಲಿಸ್ಟಿಂಗ್ ದಿನ ಅಥವಾ ಅನಂತರದಲ್ಲಿ ಇಶ್ಯೂ ಬೆಲೆಗಿಂತ ಕಡಿಮೆ ಮಟ್ಟಕ್ಕೆ ಇಳಿದಾಗ ಆ ಶೇರು ಸಿಗದವರು ಅಥವಾ ಸಿಕ್ಕಿದವರು, ಸೆಕೆಂಡರಿ ಮಾರ್ಕೆಟ್ನಲ್ಲಿ ಅದು ಬೇಕೇ ಬೇಕೆಂದು ಅನ್ನಿಸಿದಲ್ಲಿ ಆಯಾ ಹೊತ್ತಿನ ಮಾರುಕಟ್ಟೆ ದರದಲ್ಲಿ ಖರೀದಿಸಬಹುದು.
ಒಂದು ನಿರ್ದಿಷ್ಟ ಕಂಪೆನಿಯ ಪಬ್ಲಿಕ್ ಇಶ್ಯೂನಲ್ಲಿ ಒಬ್ಬ ಸಣ್ಣ ಹೂಡಿಕೆದಾರನಿಗೆ 28 ಶೇರುಗಳು ಸಿಕ್ಕಿವೆ ಎನ್ನೋಣ. ಅದೇ ಶೇರು ಲಿಸ್ಟಿಂಗ್ ಆದಾಗ ಕಡಿಮೆ ಬೆಲೆಗೆ ಇಳಿದ ಪಕ್ಷದಲ್ಲಿ ಆತ ಸೆಕೆಂಡರಿ ಮಾರ್ಕೆಟ್ ನಲ್ಲಿ ಇನ್ನೂ 12 ಶೇರು ಖರೀದಿಸಿ, ತಲಾ ಶೇರು ವೆಚ್ಚವನ್ನು ಸರಾಸರಿಯ ಮೂಲಕ ಕಡಿಮೆ ಮಾಡಿಕೊಳ್ಳಬಹುದಲ್ಲದೆ 50 ಶೇರಿನ ಒಂದು ರೌಂಡ್ ಫಿಗರ್ ಮಾಡಲೂ ಮುಂದಾಗಬಹುದು. ಇದಕ್ಕೆ ಎವರೇಜಿಂಗ್ ಎನ್ನುತ್ತಾರೆ. ಎಂದರೆ ಶೇರು ಖರೀದಿಯ ಸರಾಸರಿ ವೆಚ್ಚವನ್ನು ಕಡಿಮೆ ಮಾಡುವ ವಿಧಾನ.
ಸಾಮಾನ್ಯವಾಗಿ ಐಪಿಓ ಮೂಲಕ ಶೇರು ಪಡೆಯುವವರಿಗೆ ಅತ್ಯಧಿಕ ಲಾಭ ಇರುತ್ತದೆ. ಕೆಲವು ಐಪಿಓ ಶೇರು ಬೆಲೆ ಕೆಲವೇ ದಿನ/ತಿಂಗಳಲ್ಲಿ ಐದು, ಹತ್ತು ಅಥವಾ ಇನ್ನೆಷ್ಟೋ ಹೆಚ್ಚು ಪಟ್ಟು ಮಾರುಕಟ್ಟೆ ಬೆಲೆಗೆ ಏರುವುದುಂಟು. ಐಪಿಓ ಮೂಲಕ ಶೇರು ಪಡೆಯುವುದು ಹೆಚ್ಚು ಕ್ಷೇಮಕರ, ಲಾಭದಾಯಕ, ಕಡಿಮೆ ರಿಸ್ಕ್ ಹೂಡಿಕೆ ಎಂದೆಲ್ಲ ಹೇಳಬಹುದು.
ಆದರೆ ಕೆಲವೊಮ್ಮೆ ಈ ಮಾತುಗಳು ವಾಸ್ತವದಲ್ಲಿ ಅತಿಶಯವಾಗುವುದುಂಟು. ಸೆಕೆಂಡರಿ ಮಾರ್ಕೆಟ್ ಮೂಲಕ ಶೇರು ಖರೀದಿಗೆ ಮುಂದಾಗುವುದಕ್ಕಿಂತ ಕಡಿಮೆ ಅಪಾಯ, ರಿಸ್ಕ್ ಐಪಿಓ ಗಳಲ್ಲಿ ಇರುವುದು ಸಹಜವೂ ಸಾಮಾನ್ಯವೂ ಆಗಿದೆ.