Advertisement
ಇದೀಗ ಸೈಬರ್ ಅಪರಾಧ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾರಾದರೂ ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಬಳಿ ಬ್ಯಾಂಕ್ ಖಾತೆ, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಕೇಳಿದರೆ ಏನಾಗುತ್ತದೆ. ಅದಕ್ಕೆ ನೀವೇಗೆ ಉತ್ತರಿಸಬೇಕು? ಎಂಬುದನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ “ಸೈಬರ್ ಸ್ನೇಹಿತ-ಸಂಚಿಕೆ-1′ ಎಂಬ ಶೀರ್ಷಿಕೆ ಅಡಿಯಲ್ಲಿ 1.51 ನಿಮಿಷದ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ.
Related Articles
Advertisement
ಈ ರೀತಿ ಮಾತನಾಡಿದವರು ಆಂಗ್ಲದಲ್ಲಿ ಮಾತನಾಡಿದರೆ,”ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ’ ಅಂತಾ ಕನ್ನಡದಲ್ಲಿ ಮಾತನಾಡಿ. ಆತನಿಗೆ ಅರ್ಥವಾಗದೆ ಕರೆ ಕಟ್ ಮಾಡುತ್ತಾನೆ. ಆಗ ನಮ್ಮ ಜನ ಯಾರು ಹಣ ಕಳೆದುಕೊಳ್ಳುವುದಿಲ್ಲ. ಸೈಬರ್ ವಂಚನೆ ಆಗುವುದು ದುರಾಸೆ. ಮತ್ತೂಂದು ಅಜ್ಞಾನ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡ ಕರೆ ಮಾಡಿದರೆ ಎಚ್ಚರವಹಿಸಿ ಎಂದು ನಟ ಅಂಬರೀಷ್ ಧ್ವನಿ ಮಾದರಿಯಲ್ಲಿ ಹೇಳಲಾಗಿದೆ.
ಸೈಬರ್ ಪೊಲೀಸರ ಎಡವಟ್ಟು: ಈ ನಡುವೆ 2.50 ನಿಮಿಷದ ಮತ್ತೂಂದು ವಿಡಿಯೋದಲ್ಲಿ, ನಮಸ್ಕಾರ, ನಾನು ರೆಬಲ್ ಸ್ಟಾರ್ ಅಂಬರೀಷ್ ಸೈಬರ್ ಸ್ನೇಹಿತ ವಿಡಿಯೋಗೆ ಧ್ವನಿ ಕೊಟ್ಟಿದ್ದಾನೆ ಎಂದು ಯೋಚನೆ ಮಾಡುತ್ತಿದ್ದಿರಾ ಎಂದು ಮಾತು ಆರಂಭವಾಗುವ ವಿಡಿಯೋ ಹರಿದಾಡುತ್ತಿದೆ. ಈ ಮೂಲಕ ಸೈಬರ್ ಪೊಲೀಸರು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಧ್ವನಿ ಅನುಕರಣೆ ಮಾಡುವ ಮೊದಲು ಸಂಬಂಧಿತ ವ್ಯಕ್ತಿಯ ಅನುಮತಿ ಪಡೆಯಬೇಕು. ಆದರೆ, ಸ್ಯಾಂಡಲ್‌ವುಡ್‌ನ ಹಿರಿಯ ನಟ ಅಂಬರೀಷ್ ಧ್ವನಿ ಬಳಸಲು ಅವರಿಂದ ಸೈಬರ್ ಪೊಲೀಸರು ಅನುಮತಿ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ಯಾವುದೇ ವ್ಯಕ್ತಿ ಧ್ವನಿ ಅನುಕರಣೆ ಮಾಡುವ ಮೊದಲು ಆತನ ಅನುಮತಿ ಪಡೆಯಬೇಕು.
ಒಂದು ವೇಳೆ ಸಂಬಂಧಿತ ವ್ಯಕ್ತಿ ಧ್ವನಿ ಬಳಕೆ ಮಾಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬಹುದು ಎನ್ನುತ್ತಾರೆ ತಜ್ಞರು. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಿಸಿಬಿ ಡಿಸಿಪಿ ಎಸ್. ಗಿರೀಶ್, ಅಂಬರೀಷ್ ಮಾದರಿಯಲ್ಲಿ ಧ್ವನಿ ಇರಬಹುದು. ಅಂಬರೀಷ್ ಅವರ ಮಿಮಿಕ್ರಿ ಕೂಡ ನಾವು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.