Advertisement

ಇಂದಿನಿಂದ ಒಂದೇ ಡಿ.ಎಲ್‌, ಆರ್‌.ಸಿ.

10:04 AM Oct 02, 2019 | Team Udayavani |

ಹಲವು ವ್ಯವಸ್ಥೆಗಳಲ್ಲಿ ಆಗಲಿದೆ ಬದಲು
ಕ್ಯೂ.ಆರ್‌. ಕೋಡ್‌ ಹೇಳಲಿದೆ ಎಲ್ಲ ವಿಚಾರ

Advertisement

ಹೊಸದಿಲ್ಲಿ: ಮಂಗಳವಾರದಿಂದ ಅಂದರೆ, ಅ.1ರಿಂದ ಬ್ಯಾಂಕಿಂಗ್‌, ಜಿಎಸ್‌ಟಿ, ಚಾಲನ ಪರವಾನಿಗೆ (ಡಿಎಲ್‌) ಮತ್ತು ವಾಹನ ನೋಂದಣಿ ಪ್ರಮಾಣ ಪತ್ರದ ಕಾರ್ಡ್‌ (ಆರ್‌ಸಿ ಕಾರ್ಡ್‌) ಮುಂತಾದ ವಿಚಾರಗಳಲ್ಲಿ ಬದಲಾವಣೆಗಳಾಗಲಿವೆ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸದ್ಯ ಪ್ರತಿ ರಾಜ್ಯಗಳಲ್ಲಿ ಡಿಎಲ್‌ ಹಾಗೂ ಆರ್‌ಸಿ ಕಾರ್ಡುಗಳು ನಾನಾ ಬಣ್ಣಗಳಲ್ಲಿ ಇದ್ದು, ಅ. 1ರಿಂದ ಅವೆಲ್ಲವೂ ದೇಶಾದ್ಯಂತ ಒಂದೇ ಬಣ್ಣದಲ್ಲಿ ಬರಲಿವೆ. ಜತೆಗೆ ಪ್ರತಿ ಡಿಎಲ್‌, ಆರ್‌ಸಿ ಕಾರ್ಡ್‌ಗಳಲ್ಲಿ ಕ್ಯೂ.ಆರ್‌. ಕೋಡ್‌
ಇರಲಿದೆ. ಅದನ್ನು ಸ್ಕ್ಯಾನ್‌ ಮಾಡುವ ಮೂಲಕ ಚಾಲಕನ ಅಥವಾ ವಾಹನದ ಹಿಂದಿನ ಎಲ್ಲ ನಿಯಮ ಉಲ್ಲಂಘನೆಯ ಮಾಹಿತಿಗಳನ್ನು ಪೊಲೀಸರು ಪಡೆಯಬಹುದು. ಕಾರ್ಡ್‌ನ ಹಿಂಬದಿಯಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆ ಹೆಲ್ಪ್ಲೈನ್‌ ಸಂಖ್ಯೆ ನಮೂದಿಸಲಾಗುತ್ತದೆ.

ಈ ವ್ಯವಸ್ಥೆ ರಾಜ್ಯದಲ್ಲಿ ಶೀಘ್ರದಲ್ಲೇ ಏಕರೂಪ ಡಿಎಲ್‌ ಜಾರಿ ಮಾಡುವುದಾಗಿ ಸಾರಿಗೆ ಇಲಾಖೆ ಹಿರಿಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ. ಇದರಿಂದ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ. ಸಾರಿಗೆ ಇಲಾಖೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಇದು ಸಹಕಾರಿಯಾಗಲಿದೆ.

ಬಡ್ಡಿ ದರ ಇಳಿಕೆ
ಆರ್‌ಬಿಐ ರೆಪೋ ದರ ಇಳಿಕೆಗೆ ಅನುಗುಣವಾಗಿ ಗೃಹ, ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆ.

Advertisement

ಕನಿಷ್ಠ ಬ್ಯಾಲೆನ್ಸ್‌ ಮಿತಿ ಇಳಿಕೆ
ನಗರವಾಸಿಗಳ ಬ್ಯಾಂಕ್‌ ಖಾತೆಗಳ ಕನಿಷ್ಠ ಬ್ಯಾಲೆನ್ಸ್‌ 5,000 ರೂ.ನಿಂದ 3,000 ರೂ.ಗೆ ಇಳಿಕೆ. ಹೊಸ ಬ್ಯಾಲೆನ್ಸ್‌ ನಲ್ಲಿ ಶೇ. 75 ಇಳಿಕೆಯಾದರೆ, 15 ರೂ. ದಂಡ.

ವಿತ್‌ಡ್ರಾ-ಹೊಸ ನಿಯಮ ಜಾರಿ
ಎಸ್‌ಬಿಐ ಎಟಿಎಂ ನಗದು ವಿತ್‌ಡ್ರಾವಲ್‌ ಹೊಸ ನಿಯಮಗಳು ಜಾರಿ. 8-10 ವಿತ್‌ಡ್ರಾವಲ್‌ಗ‌ಳು ಇನ್ನು ಉಚಿತ.

ಕಾರ್ಡ್‌ಲೆಸ್‌ ವಿತ್‌ಡ್ರಾವಲ್‌ಗೆ ಶುಲ್ಕ
ಎಸ್‌ಬಿಐ ಖಾತೆಯಲ್ಲಿ ನಗದು ಇಲ್ಲದೆ ರದ್ದಾಗುವ ಎಟಿಎಂ ವಿತ್‌ಡ್ರಾವಲ್‌ ಮೇಲೂ ಶುಲ್ಕ. ಎಟಿಎಂಗಳಲ್ಲಿ ಕಾರ್ಡ್‌ ಲೆಸ್‌ ವಿತ್‌ಡ್ರಾವಲ್‌ಗೆ ಹೊಸ ಶುಲ್ಕ ನಿಗದಿ.

ಹೊಟೇಲ್‌ ಬಾಡಿಗೆ ಇಳಿಕೆ
1,000 ರೂ.ವರೆಗಿನ ಹೋಟೆಲ್‌ ರೂಂ ಬಾಡಿಗೆಗೆ ಯಾವುದೇ ತೆರಿಗೆ ಇಲ್ಲ. 7,500 ರೂ.ವರೆಗಿನ ಬಾಡಿಗೆಗೆ ಶೇ. 12ರಷ್ಟು ಜಿಎಸ್‌ಟಿ. 7,500ಕ್ಕಿಂತ ಹೆಚ್ಚು

ವಾಹನ ಸೆಸ್‌ ಇಳಿಕೆ
1,200 ಸಿಸಿ ಪೆಟ್ರೋಲ್‌ ವಾಹನದ ಮೇಲಿನ ಸೆಸ್‌ ಶೇ. 1ರಷ್ಟು , ಡೀಸೆಲ್‌ ವಾಹನಗಳ ಮೇಲಿನ ಸೆಸ್‌
ಶೇ. 3ರಷ್ಟು ಇಳಿಕೆ.

ದೇಶಾದ್ಯಂತ ಏಕರೂಪ ಡಿಎಲ್‌
ದೇಶಾದ್ಯಂತ ಏಕಸ್ವರೂಪದ ಚಾಲನ ಪರವಾನಿಗೆ (ಡಿ.ಎಲ್‌), ವಾಹನ ನೋಂದಣಿ ಪ್ರಮಾಣ ಪತ್ರ ಕಾರ್ಡ್‌ (ಆರ್‌ಸಿ ಕಾರ್ಡ್‌).

ಅನಿಲ ಸಿಲಿಂಡರ್‌ ದರ ಇಳಿಕೆ
ಸಬ್ಸಿಡಿ ರಹಿತ ಅನಿಲ ಸಿಲಿಂಡರ್‌ ದರ ಇಳಿಕೆ. ವೈಮಾನಿಕ ಇಂಧನದ ದರವೂ ಕಡಿಮೆ.

ಯೋಧರ ನಿಯಮ ಸಡಿಲು
ಸಶಸ್ತ್ರ ಮೀಸಲು ಪಡೆಯಲ್ಲಿ 7 ವರ್ಷ ಸೇವೆ ಪೂರೈಸದೆಯೂ ಮೃತರಾದರೆ, ಅವರ ಕುಟುಂಬಕ್ಕೆ ಯೋಧನ ವೇತನದ ಶೇ. 50ರಷ್ಟು ಪಿಂಚಣಿ.

Advertisement

Udayavani is now on Telegram. Click here to join our channel and stay updated with the latest news.

Next