Advertisement

ಇಂದಿನಿಂದ ಗೋವಾ ಆಸ್ಪತ್ರೆಯಲ್ಲಿ ಸ್ಥಳೀಯ ನಿವಾಸಿಗಳಿಗಷ್ಟೇ ಆದ್ಯತೆ

11:20 AM Oct 30, 2017 | Harsha Rao |

ಪಣಜಿ: ಗೋವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಬೇಕೆಂದರೆ ಗುರುತಿನ ಚೀಟಿ ಕಡ್ಡಾಯ ಎಂಬ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಇದೀಗ ಗೋವಾ ನಿವಾಸಿಗಳಿಗೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಹೇಳಿದ್ದಾರೆ. ಹೊರ ರೋಗಿ ವಿಭಾಗದಲ್ಲಿ ಸೋಮವಾರದಿಂದ ಎರಡು ಸರದಿಗಳಿರುತ್ತವೆ. ಗೋವಾ ನಿವಾಸಿಗಳು ಮತ್ತು ಹೊರ ಭಾಗದವರಿಗೆ ಪ್ರತ್ಯೇಕ ಕ್ಯೂ ಇರುತ್ತದೆ. ಆದರೆ ತುರ್ತು ಪರಿಸ್ಥಿತಿಯ ರೋಗಿಗಳಿಗೆ ಗೋವಾ ನಿವಾಸಿ ಗಳಲ್ಲದಿದ್ದರೂ ಆದ್ಯತೆಯ ಮೇರೆಗೆ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈವರೆಗೆ ಎಲ್ಲರಿಗೂ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಗೋವಾದ ಹೊರಗಿನವರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದಿದ್ದಾರೆ.

Advertisement

ಗೋವಾದ ಜನರಿಗೆ ಉತ್ತಮ ಸೇವೆ ಲಭ್ಯವಾಗ ಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ರಾಣೆ ಹೇಳಿದ್ದಾರೆ. ಉಚಿತ ಚಿಕಿತ್ಸೆ ಸೇವೆಯನ್ನು ಗೋವಾ ಜನರು ಮಾತ್ರ ವಲ್ಲದೆ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಜನರೂ ಪಡೆದು ಕೊಳ್ಳಬಹು ದಾಗಿದೆ. ಹೊರಗಿವರು ಎಷ್ಟು ಶುಲ್ಕ ವಿಧಿಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ. ದೀನ ದಯಾಳ್‌ ಸಾಮಾ ಜಿಕ ಭದ್ರತಾ ಯೋಜನೆ ಕಾರ್ಡ್‌ ಸಹಿತ ದಂತೆ ಯಾವುದೇ ಗುರುತಿನ ಚೀಟಿ ಯನ್ನು ಗೋವಾ ನಿವಾಸಿಗರು ಪ್ರದ ರ್ಶಿಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next