Advertisement

ರೋಗಿಯಿಂದ ಯೋಗಿಯೆಡೆಗೆ

02:10 PM Jun 21, 2019 | Team Udayavani |

ಮೈಸೂರು: ಯೋಗಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದ್ದು, ಇಡೀ ಜಗತ್ತಿಗೆ ಯೋಗದ ಮಹತ್ವ ಸಾರಿದ ಯೋಗ ಗುರುಗಳಲ್ಲಿ ಹಲವರು ಮೈಸೂರಿ ನವರೆ ಎಂಬುದು ವಿಶೇಷ. ಇಂತಹ ವಿಶೇಷತೆಯನ್ನು ಹೊಂದಿರುವ ಮೈಸೂರು ಪಾರಂಪರಿಕ ನಗರಿ ಹೆಸರಿನೊಂದಿಗೆ ಯೋಗ ನಗರಿ ಎಂದೂ ಕರೆಸಿಕೊಳ್ಳುತ್ತಿದೆ.

Advertisement

ತಿರುಮಲೈ ಕೃಷ್ಣಮಾಚಾರ್ಯ ಅವರಿಂದ ಹಿಡಿದು ಬಿ.ಕೆ.ಎಸ್‌. ಐಯ್ಯಂ ಗಾರ್‌, ಪಟ್ಟಾಬಿ ಜೋಯಿಷ್‌, ಬಿ.ಎನ್‌.ಎಸ್‌. ಐಯ್ಯಂಗಾರ್‌ ಸೇರಿದಂತೆ ಅನೇಕರು ಮೈಸೂರಿನವರು. ಇವರು ಕೇವಲ ಮೈಸೂರಿಗೆ ಸೀಮಿತವಾಗದೇ ದೇಶ ಹಾಗೂ ಜಗತ್ತಿನಾದ್ಯಂತ ತಿರುಗಿ ಯೋಗದ ಮಹತ್ವ ಮತ್ತು ಅಗತ್ಯವನ್ನು ತಿಳಿಸಿಕೊಟ್ಟವರು. ಇವರು ಯೋಗಕ್ಕೆ ಕೊಟ್ಟ ಕೊಡುಗೆಯನ್ನು ಅವರುಗಳ ಶಿಷ್ಯಂದಿರು ಮತ್ತು ಯುವ ಪೀಳಿಗೆ ಮುನ್ನಡೆಸಿಕೊಂಡು ಹೋಗುತ್ತಿರುವುದು ವಿಶೇಷ.

ಇಂದಿಗೂ ಮೈಸೂರು ನಗರದಲ್ಲಿ ನೂರಕ್ಕೂ ಹೆಚ್ಚು ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಜನ ಸಾಮಾನ್ಯರಿಗೆ ಯೋಗಾಸನ ಹೇಳಿ ಕೊಡುವ ಮೂಲಕ ಮತ್ತಷ್ಟು ಯೋಗದ ಮಹತ್ವವನ್ನು ಪ್ರಚುರ ಪಡಿಸಲಾಗುತ್ತಿದೆ. ಜೊತೆಗೆ ದೇಶ, ವಿದೇಶದಿಂದ ಸಾವಿರಾರು ಮಂದಿ ಮೈಸೂರಿಗೆ ಬಂದು ಯೋಗಾಭ್ಯಾಸ ಮಾಡುತ್ತಿರುವುದು ಗಮನಾರ್ಹ ಸಂಗತಿ.

ರೋಗಿಯಿಂದ ಯೋಗಿಯೆಡೆಗೆ: ಹಲವು ವರ್ಷಗಳಿಂದ ಅಲ್ಸರ್‌ ಸಮಸ್ಯೆ ಯಿಂದ ಬಳಲುತ್ತಿದ್ದ ಬಿ. ಧನ್ಯಕುಮಾರ್‌ ಅವರು 1993ರಲ್ಲಿ ಯೋಗಾಭ್ಯಾಸಕ್ಕೆ ತೊಡಗಿದ ನಂತರ ಕೆಲವೇ ವರ್ಷಗಳಲ್ಲಿ ಅವರ ಅನಾರೋಗ್ಯ ಸಮಸ್ಯೆ ಗುಣ ವಾಗಿದ್ದು, ಸದೃಢರಾದರು. ರೋಗಿ ಯಾಗಿದ್ದ ಧನ್ಯ ಕುಮಾರ್‌ ಇಂದು ಯೋಗ ಗುರುವಾಗಿ ಹೊರ ಹೊಮ್ಮಿ ದ್ದಾರೆ. ಸತತ ಯೋಗಾಭ್ಯಾಸದ ಮೂಲಕ ಯೋಗವನ್ನು ಕರಗತ ಮಾಡಿಕೊಂಡಿ ದ್ದಾರೆ. ಇಂದು ಸಾವಿರಾರು ಮಂದಿಗೆ ಯೋಗ ಹೇಳಿಕೊಡುವ ಮೂಲಕ ಇಂದು ಯೋಗ ಗುರುವಾಗಿದ್ದು, ಸಹಸ್ರಾರು ಸಂಖ್ಯೆಯ ಶಿಷ್ಯರನ್ನು ಹೊಂದಿದ್ದಾರೆ. ಇವರಲ್ಲಿ ವಿದೇಶಿಗರು ಇರುವುದು ವಿಶೇಷ.

 

Advertisement

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next