Advertisement
ಅವರಷ್ಟೇ ಅಲ್ಲ, ಅವರೊಂದಿಗೆ ಉದಯಕುಮಾರ್ ಕೂಡ ಅಂದುಕೊಂಡಿದ್ದನ್ನು ಮಾಡಿದ್ದೇವೆ ಎಂಬ ಖುಷಿಯಲ್ಲಿದ್ದಾರೆ. ಹೌದು, ಇದು ಹೊಸಬರ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ ಪ್ರೇಕ್ಷಕರ ಎದುರು ಬರಲಿದೆ.
Related Articles
Advertisement
ಇಲ್ಲಿ ಯುವ ಮನಸ್ಸುಗಳ ಜೊತೆಗೆ ಹಿರಿಯ ಜೀವಗಳಿಗೂ ದಕ್ಕುವ ಅಂಶಗಳಿವೆ. ಎಲ್ಲಾ ವರ್ಗಕ್ಕೂ ಇದು ಹಿಡಿಸುವ ಚಿತ್ರವಾಗಲಿದೆ ಎಮಬುದು ನಿರ್ದೇಶಕರ ಮಾತು. ಇನ್ನು, ಮಂಜು ರಾಜಣ್ಣ ಅವರಿಲ್ಲಿ ತುಂಬಾ ಆಸೆ ಪಟ್ಟು, ಕಷ್ಟಪಟ್ಟು, ಇಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಮೊದಲ ಚಿತ್ರವಾದ್ದರಿಂದ ಎಲ್ಲವನ್ನೂ ಕರಗತ ಮಾಡಿಕೊಂಡೇ ಕೆಲಸ ಮಾಡಿದ್ದಾರೆ.
ಆದರೂ, ಮೊದಲ ಚಿತ್ರವಾದ್ದರಿಂದ ರಿಸ್ಕ್ ಸಹಜವಾಗಿಯೇ ಇತ್ತಂತೆ. ಚಿತ್ರದಲ್ಲಿ ತರಹೇವಾರಿ ಪಾತ್ರಗಳಿವೆ. ಯಾವ ಪಾತ್ರಗಳಿಗೆ ಕಾರ್ಮೋಡ ಆವರಿಸಿಕೊಳ್ಳುತ್ತದೆ. ಅದು ಸರಿದಾಗ, ಯಾವ ಪಾತ್ರಗಳ ಮೊಗದಲ್ಲಿ ಮಂದಹಾಸ ಮೂಡುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಅವರು, ಇಲ್ಲಿ ತಿರುವುಗಳಿಗೆ ಹೆಚ್ಚು ಮಹತ್ವ ಕಲ್ಪಿಸಲಾಗಿದೆ.
ಸಾಕಷ್ಟು ಘಟನೆಗಳು ನಡೆಯುತ್ತಲೇ ಕುತೂಹಲ ಕಾಯ್ದುಕೊಂಡು ಹೋಗುತ್ತದೆ’ ಎಂದು ವಿವರ ಕೊಡುತ್ತಾರೆ. ಇಡೀ ಸಿನಿಮಾ “ಕುದುರೆಮುಖ, ಕಳಸ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಮಳೆಗಾಲದಲ್ಲೇ ಚಿತ್ರೀಕರಿಸಿದ್ದರಿಂದ ರಿಸ್ಕ್ ಸಾಮಾನ್ಯವಾಗಿತ್ತು. ಸಮಸ್ಯೆಗಳ ನಡುವೆಯೇ ಚಿತ್ರೀಕರಣ ಯಶಸ್ವಿಯಾಗಿದೆ. ಬಹುತೇಕ ಜನರಿಗೆ “ಕಾರ್ಮೋಡ ಸರಿದು’ ಆಪ್ತವೆನಿಸದೇ ಇರದು ಎಂಬುದು ಅವರ ಮಾತು.
ಚಿತ್ರದಲ್ಲಿ ಅದ್ವಿತಿ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಸತೀಶ್ ಬಾಬು ಸಂಗೀತವಿದ್ದು, ಮೂರು ಹಾಡುಗಳಿವೆ. “ಬಾಹುಬಲಿ’ ಚಿತ್ರಕ್ಕೆ ಹಾಡಿದ್ದ ಗಾಯಕರು ಇಲ್ಲೂ ಹಾಡಿದ್ದಾರೆ ಎಂಬುದು ವಿಶೇಷ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡಿಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಗಂಟೆಗಳಲ್ಲೇ ಲಕ್ಷ ಹಿಟ್ಸ್ ಸಿಕ್ಕಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.