Advertisement

ಆದಿಚುಂಚನಗಿರಿ ಮಠದಿಂದ ಜಾನಪದ ಕಲೆಗೆ ಪ್ರೋತ್ಸಾಹ

05:30 PM Sep 24, 2019 | Suhan S |

ನಾಗಮಂಗಲ: ಆದಿಚುಂಚನಗಿರಿ ಮಠ ರಾಜ್ಯದ ಸನಾತನ ಧರ್ಮಗಳಲ್ಲಿ ಪ್ರಮುಖವಾದ ಸ್ಥಾನ ಪಡೆದಿದ್ದು ಇಲ್ಲಿ ಅನ್ನ, ಅಕ್ಷರ ದಾಸೋಹದ ಜೊತೆಗೆ ಜಾನಪದ ಕಲೆ ಉಳಿಸಿ ಬೆಳೆಸುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.

Advertisement

ತಾಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 41ನೇ ರಾಜ್ಯ ಮಟ್ಟದ ಕಾಲಭೈರವೇಶ್ವರ ಸ್ವಾಮಿ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದರು. ನಾಡೋಜ ಡಾ.ಎಚ್‌.ಎಲ್‌.ನಾಗೇಗೌಡರ ಒತ್ತಾಸೆಗೆ ಪೂರಕವಾಗಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಆರಂಭಿಸಿದ ಜಾನಪದ ಕಲಾಮೇಳ 40 ವರ್ಷ ಪೂರೈಸಿ 41ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಧಾರ್ಮಿಕ ಕ್ಷೇತ್ರವೊಂದು ಹೇಗೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಬಹುದು ಎಂಬುದಕ್ಕೆ ಈ ಕಲಾಮೇಳ ಒಂದು ಜೀವಂತ ಸಾಕ್ಷಿ ಎಂದು ತಿಳಿಸಿದರು. ಇಂದು ಜಾನಪದ ಕಲಾವಿದರೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದರ ನಡುವೆಯೂ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಬಡ ಕಲಾವಿದರು ಮತ್ತು ಅಶಕ್ತ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಲು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಯುವಕರಲ್ಲಿ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಇಂದು ಎಲ್ಲಾ ಮೆರವಣಿಗೆಗಳಲ್ಲಿ ಜಾನಪದ ಕಲಾ ತಂಡಗಳು ಮುಂಚೂಣಿಯಲ್ಲಿರುವುದು ಸಂತಸ ಎಂದು ತಿಳಿಸಿದರು. ನಾಡೋಜ ಡಾ.ಎಚ್‌.ಎಲ್‌.ನಾಗೇಗೌಡ ಪ್ರಶಸ್ತಿಯನ್ನು ಕೂಡ್ಲಿಗಿ ಡೊಳ್ಳುಕುಣಿತ ಕಲಾವಿದೆ ಕೆ.ದುರ್ಗಮ್ಮ ಮತ್ತು ತಲಕಾಡಿನ ಮೂಡಲಪಾಯ ಯಕ್ಷಗಾನ ಕಲಾವಿದ ಟಿ.ಎಸ್‌.ರವೀಂದ್ರರಿಗೆ ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ, ಸಾಹಿತಿ ಪ್ರೊ.ಕೃಷ್ಣೇಗೌಡ, ತಾಪಂ ಅಧ್ಯಕ್ಷ ದಾಸೇಗೌಡ, ಜಿಪಂ ಸದಸ್ಯ ಮುತ್ತಣ್ಣ, ಜಾನಪದ ಪರಿಷತ್‌ ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯಾನಂದ ರಾಜು ಉಪಸ್ಥಿತರಿದ್ದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next