ಮುಂಬೈ: ಸಾಧಿಸುವ ಛಲ ಇದ್ದವರು ಬಡತನವನ್ನು ಮೆಟ್ಟಿ ನಿಲ್ಲುತ್ತಾರೆನ್ನುವ ಮಾತಿದೆ. ಆ ಮಾತನ್ನು ಮೈಕ್ರೋಸಾಫ್ಟ್ ಉದ್ಯೋಗಿ ಶಹೀನಾ ಅತರ್ವಾಲಾ ಸತ್ಯ ಮಾಡಿ ತೋರಿಸಿದ್ದಾರೆ.
ಮುಂಬೈನ ಕೊಳಗೇರಿಯಿಂದ ಮೈಕ್ರೋಸಾಫ್ಟ್ ಸಂಸ್ಥೆಯ ಡಿಸೈನ್ ಲೀಡರ್ ಆದ ಅವರ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಹೀನಾ ಇದೀಗ ಮೈಕ್ರೋಸಾಫ್ಟ್ ಸಂಸ್ಥೆಯ ಡಿಸೈನ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಕಂಪ್ಯೂಟರ್ ಖರೀದಿಸುವುದಕ್ಕೂ ಹಣವಿರಲಿಲ್ಲವಂತೆ.
ಇದನ್ನೂ ಓದಿ:ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ
ನೆಟ್‌ಫ್ಲಿಕ್ಸ್‌ನ “ಬ್ಯಾಡ್ ಬಾಯ್ ಬಿಲಿಯನಿಯರ್ಸ್: ಇಂಡಿಯಾ’ ಸೀರಿಸ್‌ನಲ್ಲಿ ಕೊಳಗೇರಿಯ ದೃಶ್ಯವಿದೆ. ಅದೇ ಕೊಳಗೇರಿಯಲ್ಲಿ ಶಹೀನಾ ಅವರ ಕುಟುಂಬ ವಾಸವಾಗಿತ್ತಂತೆ. 2021ರಲ್ಲಿ ಅವರು ದೊಡ್ಡದೊಂದು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ತೋರಿಸಲಾದ ಕೊಳಗೇರಿಯ ಫೋಟೋವನ್ನು ಹಂಚಿಕೊಂಡ ಶಹೀನಾ, “2015ರಲ್ಲಿ ನನ್ನ ಬದುಕು ಹುಡುಕುತ್ತಾ ಹೊರಡುವವರೆಗೂ ನಾನು ಮತ್ತು ನನ್ನ ಕುಟುಂಬ ಇದೇ ಸ್ಥಳದಲ್ಲಿದ್ದೆವು.’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.