Advertisement

ಇಂದಿನಿಂದ ಹಳ್ಳಿಗಳಿಗೆ ಬಸ್‌: ಲಕ್ಷ್ಮಣ ಸವದಿ

08:19 AM Jun 09, 2020 | Lakshmi GovindaRaj |

ಕಲಬುರಗಿ: ಲಾಕ್‌ಡೌನ್‌ದಿಂದ ಸ್ಥಗಿತಗೊಂಡಿದ್ದ ಗ್ರಾಮೀಣ ಭಾಗದ ಬಸ್‌ ಸಂಚಾರವನ್ನು ಮಂಗಳವಾರ (ಜೂನ್‌ 9)ದಿಂದ ಆರಂಭಿಸುವುದಾಗಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರಾಜಧಾನಿಯಿಂದ ಎಲ್ಲ ಜಿಲ್ಲೆ ಹಾಗೂ ತಾಲೂಕು ಸ್ಥಳಗಳಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ.

Advertisement

ಈಗ ತಾಲೂಕು ಮತ್ತು ಹೋಬಳಿಯಿಂದ ಎಲ್ಲ ಹಳ್ಳಿಗಳಿಗೆ ಅಗತ್ಯಕ್ಕನುಗುಣ ವಾಗಿ ಸಂಚಾರ  ಆರಂಭವಾಗಲಿದೆ ಎಂದರು. ನೆರೆಯ ರಾಜ್ಯಗಳಿಗೂ  ಬಸ್‌ ಆರಂಭಿಸುವ ಚಿಂತನೆ ನಡೆದಿದೆ. ಮಹಾರಾಷ್ಟ್ರ ಹೊರತುಪಡಿಸಿ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಗೋವಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದರು.

2200 ಕೋಟಿ ರೂ.ನಷ್ಟ: ಲಾಕ್‌ಡೌನ್‌ದಿಂದ ಸಾರಿಗೆ ಸಂಸ್ಥೆಗೆ 2200 ಕೋಟಿ ರೂ. ನಷ್ಟವಾಗಿದೆ. ಇದು 3000 ಕೋಟಿ ರೂ. ಗೆ ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಸಂಸ್ಥೆಯಲ್ಲಿ ಆಡಳಿತ ಸುಧಾರಣೆ ಹಾಗೂ ಸೋರಿಕೆ ತಡೆಗಟ್ಟಲು ಮತ್ತು ಕೆಲ  ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದರು. ಸಾರಿಗೆ ಸಂಸ್ಥೆಯ ನೌಕರರಿಗೆ ಎರಡು ತಿಂಗಳ ಸಂಬಳ ಸರ್ಕಾರ ನೀಡಿದೆ.

ಅದಕ್ಕಾಗಿ 650 ಕೋಟಿ ರೂ. ನೀಡಿದೆ. ಯಾರನ್ನೂ ಕೆಲಸದಿಂದ ತೆಗೆಯಲ್ಲ. ಕಡ್ಡಾಯ ರಜೆ ಇಲ್ಲವೇ ಇಲ್ಲ.  ಆದಾಗ್ಯೂ ಯಾರಾದ್ರೂ ಅಧಿಕಾರಿಗಳು ಕಡ್ಡಾಯ ರಜೆ ನೀಡಿದರೆ ಅವರ ವಿರುದಟಛಿ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿ ರಜೆ ಮಂಜೂರಾತಿಗೆ ಮತ್ತೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next