Advertisement

Bengaluru: ಇನ್ಮುಂದೆ ರಾತ್ರಿ 1ರವರೆಗೂ ಅಂಗಡಿ ಓಪನ್‌

11:36 AM Aug 07, 2024 | Team Udayavani |

ಬೆಂಗಳೂರು: ಅಬಕಾರಿ ದರ ಏರಿಕೆ, ಪೆಟ್ರೋಲ್‌ -ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದಂತಹ “ಏರಿಕೆ ಕ್ರಮ’ಗಳ ನಂತರ ಈಗ ಸರ್ಕಾರ ವಿಭಿನ್ನ ನಡೆಯ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ.

Advertisement

ಇದಕ್ಕಾಗಿ ಅತ್ಯಧಿಕ ತೆರಿಗೆ ಪಾವತಿಸುವ ರಾಜಧಾನಿ ಬೆಂಗಳೂರಿನ ಎಲ್ಲ ಪ್ರಕಾರದ ವಾಣಿಜ್ಯ ಚಟುವಟಿಕೆಗಳನ್ನು ತಡರಾತ್ರಿ 1ರವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಈಗಾಗಲೇ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಗಳಿಗೆ ತಡರಾತ್ರಿ 1ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಉಳಿದ ವಾಣಿಜ್ಯ ಮಳಿಗೆಗಳಿಗೂ ಅವಧಿ ವಿಸ್ತರಿಸಲಾಗಿದೆ. ಇದರೊಂದಿಗೆ ಬೆಂಗಳೂರಿನ “ನೈಟ್‌ ಲೈಫ್’ ಮತ್ತಷ್ಟು ತೆರೆದುಕೊಳ್ಳಲಿದ್ದು, ಮಾಲ್‌ಗ‌ಳು, ವಾಣಿಜ್ಯ ಸಮುಚ್ಚಯಗಳು, ಸೂಪರ್‌ ಮಾರ್ಕೆಟ್‌, ಬಟ್ಟೆ ಮಳಿಗೆ, ದಿನಸಿ ಒಳಗೊಂಡಂತೆ ವಿವಿಧ ಪ್ರಕಾರದ ಮಳಿಗೆಗಳೆಲ್ಲ ತಡರಾತ್ರಿವರೆಗೂ ಕಾರ್ಯನಿರ್ವಹಿಸಲಿವೆ. ಸರ್ಕಾರದ ಈ ಕ್ರಮದಿಂದ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುವವರು, ಮಧ್ಯರಾತ್ರಿ ನಗರಕ್ಕೆ ಬಂದಿಳಿಯುವ ಬಸ್‌, ರೈಲು ಮತ್ತು ವಿಮಾನ ಪ್ರಯಾಣಿಕರು ಶಾಪಿಂಗ್‌ ಮಾಡಬಯಸುವವರಿಗೆ ಇದು ಅನುಕೂಲ ಆಗಲಿದೆ. ಜತೆಗೆ ಸರ್ಕಾರದ ಬೊಕ್ಕಸಕ್ಕೆ ಬರುವ ತೆರಿಗೆ ಸಂಗ್ರಹದಲ್ಲೂ ತಕ್ಕಮಟ್ಟಿಗೆ ಹೆಚ್ಚಳ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದಕ್ಕೆ ಪೂರಕವಾಗಿ ವಿವಿಧ ವಾಣಿಜ್ಯೋದ್ಯಮಗಳ ಬೆಳವಣಿಗೆ ಜತೆಗೆ ಉದ್ಯೋಗಾವಕಾಶವೂ ಹೆಚ್ಚಲಿದೆ. ಇದಕ್ಕೆ ತಕ್ಕಂತೆ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್‌ ಗಸ್ತು ಕೂಡ ಇನ್ನಷ್ಟು ಪರಿಣಾಮಕಾರಿ ಯಾಗಿ ಆಗಬೇಕಾಗುತ್ತದೆ ಎನ್ನಲಾಗಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತಡರಾತ್ರಿ 1 ಗಂಟೆಯ ವರೆಗೆ ಎಲ್ಲ ಮಾದರಿಯ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವುದಾಗಿ ಸರ್ಕಾರವು ಘೋಷಿಸಿತ್ತು. ಅದರಂತೆ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಜುಲೈ 6ರಂದು ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆ ಸಹಮತಿ ನೀಡಿದ ಹಿನ್ನೆಲೆ ವ್ಯಾಪಾರ-ವಹಿವಾಟು ವಿಸ್ತರಣೆಗೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏಕೆ ಆದೇಶ?: ರಾಜಧಾನಿ ಬೆಂಗಳೂರಿನಲ್ಲಿ ಸಂಪನ್ಮೂಲ ಕ್ರೋಢೀಕರಣ ಹೆಚ್ಚಳವಾಗುವ ಸಾಧ್ಯತೆ ಇದೆ. ಎಲ್ಲ ಪ್ರಕಾರದ ವಾಣಿಜ್ಯ ಚಟುವಟಿಕೆಗಳನ್ನು ತಡರಾತ್ರಿ 1ರವರೆಗೆ ವಿಸ್ತರಿಸಲು ನಿರ್ಧರಿಸಿರು ವುದರಿಂದ ಅಂಗಡಿ ವರ್ತಕರ ಆದಾಯ ಹೆಚ್ಚಾಗಲಿ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಅದಾಯ ಹೆಚ್ಚಾಗಲಿದೆ. ಹೀಗಾಗಿ ಈ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಯಾರಿಗೆಲ್ಲ ಅನುಕೂಲ?: ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸು ವವರು, ಮಧ್ಯರಾತ್ರಿ ನಗರಕ್ಕೆ ಬಂದಿಳಿಯುವ ಬಸ್‌, ರೈಲು ಮತ್ತು ವಿಮಾನ ಪ್ರಯಾಣಿಕರು ಶಾಪಿಂಗ್‌ ಮಾಡಬಯಸುವವರಿಗೆ ಇದು ಅನುಕೂಲ ಆಗಲಿದೆ. ಜೊತೆಗೆ ಅಂಗಡಿಗಳ ವ್ಯಾಪಾರ ಕೂಡ ವೃದ್ಧಿಯಾಗಲಿದೆ. ಅಲ್ಲದೇ ಉದ್ಯೋಗಾವಕಾಶಗಳು ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ. ಸರ್ಕಾರದ ನಡೆಗೆ ಹೋಟೆಲ್‌ ಮಾಲೀಕರ ಸಂಘ ಸ್ವಾಗತ : ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌, “ಬೆಂಗಳೂ ರಿನಲ್ಲಿ ತಡರಾತ್ರಿ 1ರವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವುದನ್ನು ನಾವು ವಿಶೇಷವಾಗಿ ಸ್ವಾಗತಿಸುತ್ತೇವೆ. ಎಲ್ಲ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಮೊದಲು ಕಮೀಷನರೇಟ್‌ ವ್ಯಾಪ್ತಿಯಲ್ಲಿ ಮಾತ್ರ ತಡರಾತ್ರಿ 1 ಗಂಟೆವರೆಗೆ ತೆರೆದಿರುತ್ತಿತ್ತು. ಇನ್ನು ಮುಂದೆ ತಡರಾತ್ರಿ 1ಗಂಟೆ ವರೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಬಾರ್‌ಗಳನ್ನೂ 1ರವರೆಗೆ ತೆರೆಯಬಹುದಾಗಿದೆ. ಉದ್ಯೋಗವ ಕಾಶಗಳೂ ಹೆಚ್ಚಾಗಲಿವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಅಂಗಡಿ, ಹೋಟೆಲ್‌ಗ‌ಳ ಸಿಬ್ಬಂದಿಯೂ ಈ ನಿರ್ಧಾರಕ್ಕೆ ಹರ್ಷಗೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೊಂಚ ಸಹಾಯವಾಗಲಿದೆ ಎಂದು ಸಣ್ಣ-ಪುಟ್ಟ ಅಂಗಡಿ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next