Advertisement

ಜುಲೈ 20 ರಿಂದ ದಿಗಂತ್‌ ಕಥೆ ಶುರು

11:14 AM Jun 26, 2018 | Team Udayavani |

ದಿಗಂತ್‌ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಿರುವ “ಕಥೆಯೊಂದು ಶುರುವಾಗಿದೆ’ ಚಿತ್ರದ ಬಿಡುಗಡೆಯ ದಿನಾಂಕ ಅಂತಿಮವಾಗಿದೆ. ಚಿತ್ರ ಜುಲೈ 20 ರಂದು ತೆರೆಕಾಣಲಿದೆ. ಈ ಮೂಲಕ ದಿಗಂತ್‌ ಖುಷಿಯಾಗಿದ್ದಾರೆ. ಈ ಖುಷಿಗೆ ಕಾರಣ ಈ ವರ್ಷ ಬಿಡುಗಡೆಯಾಗುತ್ತಿರುವ ದಿಗಂತ್‌ ಅವರ ಮೊದಲ ಸಿನಿಮಾವಿದು. ಕಳೆದ ವರ್ಷ ದಿಗಂತ್‌ ಅವರ “ಹ್ಯಾಪಿ ನ್ಯೂ ಇಯರ್‌’ ಚಿತ್ರ ತೆರೆಕಂಡಿತ್ತು.

Advertisement

ಆ ನಂತರ ಇಲ್ಲಿವರೆಗೆ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈಗ “ಕಥೆಯೊಂದು ಶುರುವಾಗಿದೆ’ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್‌ಗೂ ಮೆಚ್ಚುಗೆ ವ್ಯಕ್ತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಚಿತ್ರತಂಡಕ್ಕೆ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿದೆ. ಜೊತೆಗೆ ಚಿತ್ರದ ಮೊದಲ ವಿಡಿಯೋ ಸಾಂಗ್‌ ಕೂಡಾ ಬಿಡುಗಡೆಯಾಗಿದೆ. 

ಈ ಚಿತ್ರವನ್ನು ಸೆನ್ನಾ ಹೆಗ್ಡೆ ನಿರ್ದೇಶಿಸಿದ್ದು, ಪುಷ್ಕರ್‌ ಹಾಗೂ ಪರಂವಾ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಿದೆ. ದಿಗಂತ್‌ಗೆ ನಾಯಕಿಯಾಗಿ ಪೂಜಾ ದೇವರಿಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ದಿಗಂತ್‌ ನಾನಿಲ್ಲಿ ರೆಸಾರ್ಟ್‌ ಮಾಲೀಕನಾಗಿ ನಟಿಸಿದ್ದಾರೆ. ಮಿಡ್‌ಲೈಫ್ಗೆ  ಬಂದ ಯುವಕನ ತಳಮಳನ್ನು ಅವರ ಪಾತ್ರದ ಮೂಲಕ ಇಲ್ಲಿ ತೋರಿಸಲಾಗಿದೆ. ಮದುವೆಯಾಗುತ್ತಾ, ಇಲ್ವಾ, ಒಂಟಿತನದ ಭಯವನ್ನು ಇಲ್ಲಿ ಬಿಂಬಿಸಲಾಗಿದೆ.

ಚಿತ್ರದಲ್ಲಿ ಮೂರು ವಯಸ್ಸಿನವರ ಮೂಲಕ ಜೀವನವನ್ನು ಕಟ್ಟಿಕೊಡಲಾಗಿದ್ದು, 20ರಿಂದ 21ರ ಒಂದು ಜೋಡಿ., 30ರ ಯುವಕ, 60 ರ ಒಂದು ಜೋಡಿ ಹಾಗೂ ಅವರ ಚಿಂತನೆಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. “ಕಥೆಯೊಂದು ಶುರುವಾಗಿದೆ’ ನಾಲ್ಕು ದಿನದಲ್ಲಿ ನಡೆಯುವ ಕಥೆ. ಸೋಮವಾರ ಆರಂಭವಾಗಿ ಗುರುವಾರ ಮುಗಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಕಥೆಯನ್ನು ಮಜಾವಾಗಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ಅರುಣಾ ಬಾಲರಾಜ್‌, ಬಾಬು ಹಿರಣ್ಣಯ್ಯ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next