Advertisement

ಚೆಕ್‌ ವ್ಯವಹಾರಗಳ ಮೇಲೆ ಜಿಎಸ್‌ಟಿ ಇಲ್ಲ; ರಾಜ್ಯಸಭೆಯಲ್ಲಿ ಕೇಂದ್ರ ವಿತ್ತ ಸಚಿವರ ಸ್ಪಷ್ಟನೆ

09:26 PM Aug 02, 2022 | Team Udayavani |

ನವದೆಹಲಿ: ಬ್ಯಾಂಕ್‌ಗಳಲ್ಲಿ ಚೆಕ್‌ಗಳ ಮೂಲಕ ನಡೆಯುವ ನಗದು ವ್ಯವಹಾರಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ ಕೊಟ್ಟಿದ್ದಾರೆ.

Advertisement

ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ನಿಯಮಗಳಲ್ಲಿ ಗೊಂದಲಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದು, ಬ್ಯಾಂಕ್‌ಗಳು ತಮ್ಮ ಚೆಕ್‌ಪುಸ್ತಕಗಳನ್ನು ಮುದ್ರಕರಿಂದ ಪಡೆಯುವ ವ್ಯವಹಾರದ ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ, ಗ್ರಾಹಕರು ನೀಡುವ ಚೆಕ್‌ ವ್ಯವಹಾರಗಳ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಇದಲ್ಲದೆ, ಬ್ಯಾಂಕ್‌ಗಳ ಕ್ಯಾಶ್‌ ಕೌಂಟರ್‌ಗಳಲ್ಲಿ ನಗದು ಹಿಂಪಡೆಯುವುದಕ್ಕೆ ಜಿಎಸ್‌ಟಿ ಇಲ್ಲ. ಆದರೆ, ಬ್ಯಾಂಕುಗಳಿಂದ ಮಾಸಿಕ 5 ಬಾರಿ ಹಾಗೂ ಎಟಿಎಂಗಳಿಂದ ಮಾಸಿಕ 5 ಬಾರಿ ಹಣವನ್ನು ಶುಲ್ಕ ರಹಿತವಾಗಿ ಹಿಂಪಡೆಯಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಚಿತಾಗಾರಗಳಲ್ಲಿ ಶವಸಂಸ್ಕಾರ ಪ್ರಕ್ರಿಯೆಗೆ ಯಾವುದೇ ಜಿಎಸ್‌ಟಿ ಇಲ್ಲ. ಆದರೆ, ಹೊಸತಾಗಿ ಚಿತಾಗಾರಗಳ ನಿರ್ಮಾಣಕ್ಕೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಜತೆಗೆ, ಸರ್ಕಾರವು ಹಣದುಬ್ಬರ ಇಳಿಕೆಗೆ ಎಲ್ಲ ರೀತಿಯಲ್ಲೂ ಕ್ರಮ ಕೈಗೊಂಡಿದೆ. ಈಗಾಗಲೇ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ದರವನ್ನು ನಿಯಂತ್ರಿಸಲಾಗಿದೆ ಎಂದಿದ್ದಾರೆ.

ಯಾರೊಬ್ಬರೂ ಮಾತಾಡಲಿಲ್ಲ: ಸಚಿವೆ ಬೇಸರ
ಆಹಾರ ಧಾನ್ಯಗಳ ಚಿಲ್ಲರೆ ಮಾರಾಟದ ಮೇಲೆ ಜಿಎಸ್‌ಟಿ ಇಲ್ಲ. ಆದರೆ, ಪ್ಯಾಕ್‌ ಮಾಡಲಾದ ಆಹಾರ ಉತ್ಪನ್ನಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ಇದನ್ನು ಚರ್ಚಿಸಿಯೇ ತೀರ್ಮಾನ ಕೈಗೊಂಡಿದ್ದರೂ, ವಿಪಕ್ಷಗಳು ಅನವಶ್ಯಕವಾಗಿ ಪ್ರತಿಭಟನೆ ನಡೆಸಲಾಯಿತು. ಸಭೆಯಲ್ಲಿ ವಿಪಕ್ಷಗಳು ಈ ನಿರ್ಣಯ ಒಪ್ಪಿದ್ದರ ಬಗ್ಗೆ ಯಾವುದೇ ವಿಪಕ್ಷಗಳ ನಾಯಕ ಚಕಾರ ಎತ್ತಲಿಲ್ಲ ಎಂದು ಅವರು ವಿಷಾದಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next