Advertisement

ಶಿಕ್ಷಣದಿಂದ ಸರ್ವಾಂಗೀಣ ವ್ಯಕ್ತಿತ್ವ

06:27 PM Jan 20, 2021 | Team Udayavani |

ಬಳ್ಳಾರಿ: ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕೇವಲ ಮಾಹಿತಿಯನ್ನು ಮಾತ್ರ ನೀಡಿ, ಪರಿಪೂರ್ಣತೆಯ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ| ತಳವಾರ ಸಾಬಣ್ಣ ಹೇಳಿದರು.

Advertisement

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ವಿವೇಕ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಕುರಿತಾದ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧಿ  ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ:ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲು ಸಿಕ್ಕೇ ಸಿಗುತ್ತೆ

ಶಿಕ್ಷಣ ಪದ್ಧತಿಯಲ್ಲಿ ಇಂದು ಮೌಲ್ಯಗಳು ಕುಸಿಯುತ್ತಿವೆ. ಇಂತಹ ಶಿಕ್ಷಣ ಪದ್ಧತಿಯನ್ನು ಬದಲಿಸಬೇಕಿದೆ. ಈ ಶಿಕ್ಷಣ ಪದ್ಧತಿಯಲ್ಲಿ ರಾಷ್ಟ್ರೀಯ ಸಂಸ್ಕೃತಿಯನ್ನು ಕಳೆದು ಕೊಳ್ಳುತ್ತಿದ್ದೇವೆ. ವಿದೇಶಿ ಶಿಕ್ಷಣ ಪದ್ಧತಿಯಿಂದ ನಾವು ಶಿಕ್ಷಿತರಾದರೆ ಅದು ಗುಲಾಮಿ ಪದ್ಧತಿ ರೂಢಿಗತ ಮಾಡುತ್ತದೆ ಎಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು, ಮಾತೃ ಭಾಷೆಯ ಕಡ್ಡಾಯ ಶಿಕ್ಷಣ, ಆಂತರಿಕ ಸ್ವಾವಲಂಬನೆ ಮತ್ತು ಜಾತ್ಯಾತೀತ ವ್ಯವಸ್ಥೆಯ ನಿರ್ಮಾಣದ ಗುರಿ ವಿವೇಕರ ಅಭಿಪ್ರಾಯವಾಗಿತು ಎಂದರು. ಶಿಕ್ಷಣ ಬದುಕಿನ ಗುರಿ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಪೂರಕವಾಗಿರಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಗುರುಕುಲ ಪದ್ಧತಿಯು ವ್ಯಕ್ತಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಹಲವು ಕ್ಷೇತ್ರಗಳ ಮಾಹಿತಿ ನೀಡುತ್ತಿತ್ತು ಎಂದು ಹೇಳಿದರು.

ವಿವಿ ಕುಲಸಚಿವ ಪ್ರೊ| ಬಿ.ಕೆ. ತುಳಸಿಮಾಲಾ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ| ಶಶಿಕಾಂತ ಉಡಿಕೇರಿ, ಹಣಕಾಸು ಅಧಿ ಕಾರಿ ಡಾ| ಕೆ.ಸಿ.ಪ್ರಶಾಂತ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ| ಜಿ.ಪಿ.ದಿನೇಶ್‌ ಹಾಗೂ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next