Advertisement

ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೋವಿಡ್ ಲಸಿಕೆ : ಕೇಂದ್ರ

04:41 PM Mar 23, 2021 | Team Udayavani |

ನವ ದೆಹಲಿ : 45 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ಏಪ್ರಿಲ್ 1 ರಿಂದ ಕೋವಿಡ್ 19 ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಇಂದು(ಮಂಗಳವಾರ, ಮಾ. 23) ಹೇಳಿದ್ದಾರೆ.

Advertisement

ಕೋವಿಡ್ 19  ರೂಪಾಂತರಿ ಅಲೆ ದೇಶದ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ 45 ವರ್ಷ  ಮತ್ತು ಅದಕ್ಕೂ ಮೇಲ್ಪಟ್ಟವರಿಗರ ಕೋವಿಡ್ ಲಸಿಕೆಯನ್ನು ನೀಡಲು ಮುಂದಾಗಿದೆ. 45 ವರ್ಷ ಹಾಗೂ ಅದಕ್ಕೂ ಮೇಲಿನ ವಯಸ್ಸಿನ ನಾಗರಿಕರೆಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಿ ಎಂದು ಜಾವಡೆಕರ್ ಮನವಿ ಮಾಡಿಕೊಂಡಿದ್ದಾರೆ.

ಓದಿ :  ತಲೈವಿ ಟ್ರೈಲರ್ : ಜಯಲಲಿತ ಅವರ ಜೀವನ ಪಯಣ : ಸಿನೆಮಾ ಟು ರಾಜಕಾರಣ  

ಪ್ರಸ್ತುತ ದೇಶದಲ್ಲಿ, 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ, ಅದರಲ್ಲೂ ಇತರೆ ಕಾಯಿಲೆಗಳು ಉಳ್ಳವರಿಗೆ ಮಾತ್ರ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ.

ಇನ್ನು, ಈ ನಿರ್ಧಾರವನ್ನು ಸಂಸತ್ತಿನಲ್ಲಿ, ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ನ ತಜ್ಞರ ಸಲಹೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಜಾವಡೆಕರ್ ತಿಳಿಸಿದ್ದಾರೆ.

Advertisement

ದೇಶದಲ್ಲಿ ಸುಮಾರು 4.85 ಕೋಟಿ ಮಂದಿ ಕೋವಿಡ್ ಲಸಿಕೆಯ ಒಂದು ಡೋಸ್ ನ್ನು ಸ್ವಿಕರಿಸಿದರೇ, 80 ಲಕ್ಷ ಮಂದಿ ಎರಡು ಡೋಸ್ ಗಳನ್ನು ಸ್ವಿಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಕೋವಿಡ್ ವ್ಯಾಕ್ಸಿನೇಶನ್ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು.

ಓದಿ :  ವ್ಯಾಕ್ಸಿನೇಶನ್ ಗೆ ವಯೋಮಿತಿ ತೆಗೆಯಿರಿ:ಕೇಂದ್ರಕ್ಕೆ ರಾಜಸ್ಥಾನ,ಪಂಜಾಬ್ ಮುಖ್ಯಮಂತ್ರಿಗಳ ಮನವಿ

Advertisement

Udayavani is now on Telegram. Click here to join our channel and stay updated with the latest news.

Next