Advertisement

ಅಳ್ನಾವರದಿಂದ 11 ಹಳ್ಳಿಗಳು ಧಾರವಾಡ ಗ್ರಾಮೀಣ ಠಾಣೆಗೆ

10:07 AM Aug 27, 2019 | Suhan S |

ಧಾರವಾಡ: ನಗರಕ್ಕೆ ಹತ್ತಿರವಿದ್ದ ಅಳ್ನಾವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದ್ದ 11 ಗ್ರಾಮಗಳು ಇದೀಗ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿಕೊಂಡಿದ್ದು, ಕೊನೆಗೂ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

Advertisement

ಧಾರವಾಡ ತಾಲೂಕಿನ ಪಶ್ಚಿಮ ಭಾಗಕ್ಕಿರುವ ನಿಗದಿ, ಬೆನಕಟ್ಟಿ, ದೇವರಹುಬ್ಬಳ್ಳಿ, ಲಾಳಗಟ್ಟಿ, ದೇವಗಿರಿ, ಹಳ್ಳಿಗೇರಿ, ಹೊಲ್ತಿಕೋಟಿ, ಅಂಬ್ಲಿಕೊಪ್ಪ, ಮುರಕಟ್ಟಿ, ಬಣದೂರು, ಮಾವಿನಕೊಪ್ಪ ಗ್ರಾಮಗಳು ಇದೀಗ ಅಳ್ನಾವರ ಠಾಣೆಯಿಂದ ಧಾರವಾಡ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಸೇರಿದಂತಾಗಿದೆ.

ಧಾರವಾಡ ಗ್ರಾಮೀಣ ಠಾಣೆಗೆ ತಮ್ಮನ್ನು ಸೇರ್ಪಡೆ ಮಾಡುವಂತೆ ಹಳ್ಳಿಯ ಮುಖಂಡರು ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದಿಸಿ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕುಲಕರ್ಣಿಗೆ ಅಭಿನಂದನೆ: ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಕ್ರಮವಹಿಸಲು ಶಿಫಾರಸು ಮಾಡಿದ್ದರು. ಈ ಹಳ್ಳಿಗಳನ್ನು ಅಳ್ನಾವರ ತಾಲೂಕಿಗೆ ಸೇರ್ಪಡೆಗೊಳಿಸಿದಾಗಲೂ ಮರಳಿ ಧಾರವಾಡ ತಾಲೂಕಿನಲ್ಲಿಯೇ ಇರುವಂತೆ ನೋಡಿಕೊಳ್ಳಲು ಶಿಫಾರಸು ಮಾಡಿದ್ದರು. ಹೀಗಾಗಿ ಈ ಹಳ್ಳಿಗಳ ಮುಖಂಡರು ವಿನಯ್‌ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮಲ್ಲನಗೌಡ ಪಾಟೀಲ, ದ್ಯಾಮಪ್ಪ ನವನಕ್ಕಿ, ಮಹಾದೇವಪ್ಪ ನೀರಲಗಿ, ವೀರಭದ್ರ ರೇಶ್ಮಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next