Advertisement

ಕೂಡಿಗೆ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ

07:44 PM Jul 17, 2019 | sudhir |

ಮಡಿಕೇರಿ :ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾದಾಗ ಕಪ್ಪೆಗಳ ಮದುವೆ ಮೂಲಕ ವರುಣನನ್ನು ಪ್ರಾರ್ಥಿಸುವ ಆಚರಣೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದೆ.

Advertisement

ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮದಲ್ಲೂ ಅಪರೂಪದ ಪ್ರಸಂಗವೆಂಬಂತೆ ಕಪ್ಪೆಗಳ ಮದುವೆ ನಡೆಯಿತು. ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು, ಇದರಿಂದ ಕಂಗೆಟ್ಟ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ರೈತರು ಮಳೆಗಾಗಿ ಕಪ್ಪೆಗಳ ಮದುವೆಯನ್ನು ಮಾಡಿ ಪ್ರಾರ್ಥಿಸಿದ ಪ್ರಸಂಗ ನಡೆಯಿತು.

ಇಲ್ಲಿನ ಗ್ರಾಮಸ್ಥರು ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದು ರೈತರೊಬ್ಬರ ಜಮೀನ ಮರವೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ.

ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡ ಲಾಗಿತ್ತು. ಮನುಷ್ಯರ ಮದುವೆಯ ಸಂಪ್ರದಾಯದಂತೆಯೇ ಈ ಕಪ್ಪೆಗಳ ಮದುವೆಯೂ ಮಳೆಗಾಗಿ ನಡೆಯಿತು.

ಕಪ್ಪೆಗಳ ಮದುವೆ ಮಾಡಿದ ನಂತರ ರೈತರು ಮಳೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಮಂಜುನಾಥ್‌, ಗೋವಿಂದ, ಗಿರೀಶ್‌, ಗಣೇಶ್‌, ನಾಗರಾಜ್‌, ಚಿಣ್ಣಪ್ಪ, ಶೋಭ, ಮಂಜಮ್ಮ, ಸುಶೀಲಮ್ಮ ಸೇರಿದಂತೆ ಊರಿನ ರೈತರು, ಗ್ರಾಮಸ್ಥರು ಕಪ್ಪೆಗಳ ಮದುವೆಗೆ ಸಾಕ್ಷಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next