Advertisement

ಸೌಹಾರ್ದ ಸಂಬಂಧ ಬೆಸೆಯುವ ಕ್ರೀಡೆ

03:59 PM Aug 03, 2019 | Team Udayavani |

ಯಲಬುರ್ಗಾ: ಗ್ರಾಮೀಣ ಮಕ್ಕಳಲ್ಲಿ ಕ್ರೀಡೆಯ ಆಸಕ್ತಿ ಮೂಡಿಸಿ ಉತ್ತಮ ಕ್ರೀಡಾಪಟುವನ್ನಾಗಿಸಬೇಕು. ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ತೋರುವುದರ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡುವಂತಾಗಬೇಕು ಎಂದು ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ ಹೇಳಿದರು.

Advertisement

ತಾಲೂಕಿನ ಸಾಲಬಾವಿ ಗ್ರಾಮದ‌ಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಮ್ಯಾಗೇರಿ, ವಜ್ರಬಂಡಿ, ಬಂಡಿ ಪ್ರಾಥಮಿಕ ಶಾಲೆಗಳ ಅಂತರ ವಲಯಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಇಲಾಖೆ ನಡೆಸುವ ಕಾರ್ಯಕ್ರಮಗಳೇ ಬಹುತೇಕ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಿವೆ ಎಂದರು. ಕ್ರೀಡೆಗಳು ಸೌಹಾರ್ದ ಸಂಬಂಧಗಳನ್ನು ಬೆಸೆಯುತ್ತವೆ. ಜತೆಗೆ ಮನುಷ್ಯನ ಬೌದ್ಧಿಕ ಶಕ್ತಿಯನ್ನು ವೃದ್ಧಿಸುತ್ತಿದ್ದು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹಕಾರಿಯಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು-ಗೆಲುವು ನೆಪ ಮಾತ್ರ. ಪ್ರತಿ ವಿದ್ಯಾರ್ಥಿಯೂ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ ಮಾತನಾಡಿ, ನಿರ್ಣಾಯಕರು ನೀಡುವ ತೀರ್ಪನ್ನು ಎಲ್ಲ ಕ್ರೀಡಾಪಟುಗಳು ಗೌರವದಿಂದ ಪಾಲಿಸಬೇಕು, ಕ್ರೀಡಾ ಮನೋಭಾವವನ್ನು ಜೀವನದಲ್ಲೂ ಅಳವಡಿಸಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಲಿಂಗನಬಂಡಿ ಮೌನೇಶ್ವರಮಠದ ಉಳಿವೇಂದ್ರಸ್ವಾಮಿ ಮೌನೇಶ್ವರಮಠ ಸಾನಿಧ್ಯ ವಹಿಸಿದ್ದರು. ವಜ್ರಬಂಡಿ ಗ್ರಾಪಂ ಅಧ್ಯಕ್ಷೆ ಲಕ್ಷ ್ಮವ್ವ ಕೆಂಚಣ್ಣನವರ್‌ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ಓಬಳೆಪ್ಪ ಕುಲಕರ್ಣಿ, ಸಾವಿತ್ರಿ ಗೊಲ್ಲರ್‌, ಎಸ್‌ಡಿಎಂಸಿ ಅಧ್ಯಕ್ಷ ಮಾನಪ್ಪ ಸೂಳಿಕೇರಿ, ಗ್ರಾಪಂ ಸದಸ್ಯ ಗುಂಡನಗೌಡ ಮಾಲಿಪಾಟೀಲ್, ಮುಖಂಡರಾದ ಹನಮಗೌಡ ಪೂಜಾರ್‌, ಗೋಪಾಲಗೌಡ ಮಾಲಿಪಾಟೀಲ, ಹನಮಪ್ಪ ಮದಲಗಟ್ಟಿ, ರಾಮಣ್ಣ ಮಾಲಿಪಾಟೀಲ, ಹನಮಪ್ಪ ಗುರಿಕಾರ, ದೇವಪ್ಪ ಹಿರೇಮನಿ, ಬಸವರಾಜ ಜಂಬಳ್ಳಿ, ಮುಖ್ಯಶಿಕ್ಷಕ ಶಿವಾನಂದ ಬಾಗೇವಾಡಿಮಠ, ದೈಹಿಕ ಶಿಕ್ಷಣಾಧಿಕಾರಿ ಶರಣಪ್ಪ ವೀರಾಪೂರ್‌, ಸಿದ್ಧಲಿಂಗಪ್ಪ ಶ್ಯಾಗೋಟಿ, ಬಾಲದಂಡಪ್ಪ ತಳವಾರ್‌, ಬಸವರಾಜ ಅಡಿವೆಪ್ಪನವರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next