Advertisement

ವಿದ್ಯಾಭಿಮಾನಿಗಳ  ಸ್ನೇಹ ಸಮ್ಮಿಲನ, ಆಟಿಡೊಂಜಿ ದಿನ

07:30 AM Jul 23, 2017 | Harsha Rao |

ಸವಣೂರು : ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಾವು ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು ಎಂದು ಸವಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಬಿ.ವಿ. ಸೂರ್ಯನಾರಾಯಣ ಅವರು ಹೇಳಿದರು.

Advertisement

ಗ್ರಾಮೀಣ ಭಾಗದ ಆಟಿಕಳೆಂಜ, ಕರಂಗೋಲು ಮೊದಲಾದ ಜನಪದ ಸಂಸ್ಕೃತಿಗಳು ದೂರವಾಗುತ್ತಿದ್ದು ಕೇವಲ ವೇದಿಕೆಯಲ್ಲಿ ಕಾಣುವಂತಾಗಿದೆ. ಇಂತಹ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಆಟಿದ ಪರ್ಬ ಆಚರಣೆಗಳು ನಡೆಯಬೇಕು ಎಂದರು.

ಅವರು ಜು. 22ರಂದು  ಸವಣೂರು ಉ.ಹಿ.ಪ್ರಾ.ಶಾಲೆ ಇದರ ಶತಮಾನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಹಿರಿಯ ವಿದ್ಯಾರ್ಥಿಗಳ  ಹಾಗೂ ವಿದ್ಯಾಭಿಮಾನಿಗಳ  ಸ್ನೇಹ ಸಮ್ಮಿಲನ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.

ಕಾರ್ಯಕ್ರಮವನ್ನು ವಿಜಯ ಬ್ಯಾಂಕ್‌ನ‌ ಪ್ರಬಂಧಕ ಸುಂದರ ಗೌಡ ಸವಣೂರು ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ರೋಟರಿಕ್ಲಬ್‌ಪುತ್ತೂರು ಇದರ  ಪೂರ್ವಾಧ್ಯಕ್ಷ ಕೃಷ್ಣ ಕುಮಾರ್‌ ರೈ ದೇವಸ್ಯ ವಹಿಸಿದ್ದರು.
ಅತಿಥಿಗಳಾಗಿ ನಿವೃತ್ತ ಅಂಚೆ ಪಾಲಕ ನಾರಾಯಣ ಕನಡ ಬಸ್ತಿ, ಸವಣೂರು ಗ್ರಾ.ಪಂ. ಸದಸ್ಯ ಸತೀಶ್‌ ಬಲ್ಯಾಯ, ಪ್ರಕಾಶ್‌ ಕುದ್ಮನಮಜಲು, ರಾಜೀವಿ ಶೆಟ್ಟಿ ಕೆಡೆಂಜಿ, ಗಾಯತ್ರಿ ಬರೆಮೇಲು, ಉದ್ಯಮಿ ಸುಜಿತ್‌ ಕುಮಾರ್‌ ಶೆಟ್ಟಿ ನಡುಬೈಲು , ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಮಹಮ್ಮದ್‌ ಕಣಿಮಜಲು, ಶಿವರಾಮ ಗೌಡ ಮೆದು, ಸವಣೂರು ಕ್ಲಸ್ಟರ್‌ ಸಿಆರ್‌ಪಿ ವೆಂಕಟೇಶ್‌ ಅನಂತಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಚಂದ್ರಶೇಖರ್‌ ಮೆದು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಕಾರ್ಯದರ್ಶಿ ಪ್ರಕಾಶ್‌ ರೈ ಸಾರಕರೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪುಷ್ಪಾವತಿ, ಶತಮಾನೋತ್ಸವ ಸಮಿತಿ ಕಾರ್ಯಕ್ರಮ ಸಂಯೋಜಕ ಗಿರಿಶಂಕರ್‌ ಸುಲಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗನ್ನಾಥ ರೈ ನಡುಬೈಲು, ವಿಶ್ವನಾಥ ಪೂವ, ಬಾಬು ಎನ್‌., ಸುಪ್ರಿತ್‌ ರೈ ಖಂಡಿಗ , ಗಂಗಾಧರ ಸುಣ್ಣಾಜೆ, ಶಿಕ್ಷಕರಾದ ಕುಶಾಲಪ್ಪ ಟಿ. ಮೆಬಲ್‌ ರೋಡ್ರಿಗಸ್‌, ಸರೋಜ, ಆಶಾಲತಾ, ವೇದಾವತಿ ದಯಾನಂದ, ಪಿ.ಡಿ. ಗಂಗಾಧರ ರೈ, ಸುಬ್ಬಣ್ಣ ರೈ ಖಂಡಿಗ ಅತಿಥಿಗಳನ್ನು ಗೌರವಿಸಿದರು.

Advertisement

ದೇಣಿಗೆ ಘೋಷಣೆ
ಈ ಸಂದರ್ಭದಲ್ಲಿ  ಸುಜಿತ್‌ ಕುಮಾರ್‌ ಶೆಟ್ಟಿ  ನಡುಬೈಲು ಅವರು ಶಾಲಾ ನೂತನ ಕಟ್ಟಡ ರಚನೆಗಾಗಿ 2.5 ಲಕ್ಷ ರೂ., ನಾರಾಯಣ ಕನಡ ಬಸ್ತಿ 50,000 ರೂ., ಮಹಮ್ಮದ್‌ ಕಣಿಮಜಲು 25,000 ರೂ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಮೆದು 25,000 ರೂ., ಪ್ರಗತಿಪರ ಕೃಷಿಕ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು 25,000 ರೂ., ಸುಬ್ಬಣ್ಣ ರೈ ಖಂಡಿಗ 15,000, ಶಿವರಾಮ ಗೌಡ ಮೆದು 10,000 ರೂ., ಮುಖ್ಯ ಶಿಕ್ಷಕ ಹರಿಶಂಕರ್‌ ಭಟ್‌ 10,000 ನೀಡುವುದಾಗಿ ಘೋಷಿಸಿದರು. 

ವಿಜಯ ಬ್ಯಾಂಕ್‌ನ‌ ಪ್ರಬಂಧಕ ಸುಂದರ ಗೌಡ ಸವಣೂರು, ರೋಟರಿ ಕ್ಲಬ್‌ ಪುತ್ತೂರು ಇದರ  ಪೂರ್ವಾಧ್ಯಕ್ಷ ಕೃಷ್ಣ ಕುಮಾರ್‌ ರೈ ದೇವಸ್ಯ ಅವರು ಗರಿಷ್ಠ ಮಟ್ಟದ ದೇಣಿಗೆ ನೀಡುತ್ತೇವೆ ಎಂದರು.

ವಿಶೇಷತೆ
ಕಾರ್ಯಕ್ರಮದಲ್ಲಿ ಆಟಿ ತಿಂಡಿ ತಿನಿಸುಗಳ ಪ್ರದರ್ಶನ , ಸ್ಪರ್ಧೆ, ಪುರಾತನ ವಸ್ತುಗಳ ಪ್ರದರ್ಶನ ನಡೆಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ  ದಿನೇಶ್‌ ಮೆದು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತಾರಾನಾಥ ಸವಣೂರು ಪ್ರಸ್ತಾವನೆಗೈದರು. ಶಾಲಾ ಮುಖ್ಯಗುರು ಹರಿಶಂಕರ್‌ ಭಟ್‌ ವಂದಿಸಿದರು. ರಾಕೇಶ್‌ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next