Advertisement

Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ

04:23 AM Dec 16, 2024 | Team Udayavani |

ಹೊಸದಿಲ್ಲಿ: ಸಂಸತ್‌ ಕಲಾಪಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ರವಿವಾರ ಲೋಕಸಭೆ ಮತ್ತು ರಾಜ್ಯಸಭೆಯ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಲಾ ಗಿತ್ತು.

Advertisement

ಈ ಪಂದ್ಯದಲ್ಲಿ ಅನುರಾಗ್‌ ಠಾಕೂರ್‌ ನೇತೃತ್ವದ ಲೋಕಸಭಾ ಸ್ಪೀಕರ್‌-ಇಲೆವೆನ್‌ ತಂಡ, ಕಿರಣ್‌ ರಿಜಿಜು ನಾಯಕತ್ವದ ರಾಜ್ಯಸಭಾ ಸಭಾಪತಿ ಇಲೆವೆನ್‌ ತಂಡವನ್ನು 73 ರನ್ನುಗಳಿಂದ ಸೋಲಿಸಿತು.ಧ್ಯಾನ್‌ಚಂದ್‌ ನ್ಯಾಶನಲ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿತ್ತು.

ಈ ಪಂದ್ಯದಲ್ಲಿ ಲೋಕಸಭೆ ತಂಡದ ನಾಯಕ ಅನುರಾಗ್‌ ಠಾಕೂರ್‌ 111 ರನ್‌ ಗಳಿಸಿ ಗಮನ ಸೆಳೆದರು. ಕರ್ನಾಟಕದ ಸಂಸದ ಸುಧಾಕರ್‌ “ಬೆಸ್ಟ್‌ ಸಿಕ್ಸರ್‌’ ಪ್ರಶಸ್ತಿ ಪಡೆದುಕೊಂಡರು. ದೇಶದಲ್ಲಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲು ಹಾಗೂ ರೋಗಿಗಳಿಗೆ ನೆರವಾಗುವು ದಕ್ಕಾಗಿ ಈ ಪಂದ್ಯವನ್ನು ಆಯೋಜಿಸಲಾಗಿತ್ತು ಎಂದು ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next