Advertisement

ಸಸ್ಯಗಳಿಂದ ಕೊರೊನಾ ಲಸಿಕೆ ಉತ್ಪಾದನೆ!

11:30 PM Sep 08, 2021 | Team Udayavani |

ವಾಷಿಂಗ್ಟನ್: ಸಸ್ಯಗಳಲ್ಲಿ ಕಂಡುಬರುವ ವೈರಾಣು ಹಾಗೂ ಬ್ಯಾಕ್ಟೀರಿಯಾಗಳ ಸಹಾಯದಿಂದ ಕೊರೊನಾ ಲಸಿಕೆಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇವಿನ್ನೂ ವಿವಿಧ ಪ್ರಾಯೋಗಿಕ ಹಂತಗಳಲ್ಲಿದ್ದು, ಇವುಗಳ ಶಕ್ತಿ ಸಾಬೀತಾದರೆ ಇವು ಜಗತ್ತಿನ ಲಸಿಕೆ ಸಂಶೋಧನ ಕ್ಷೇತ್ರದಲ್ಲೇ ಹೊಸ ಅಧ್ಯಾಯ ಸೃಷ್ಟಿಸಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಒಟ್ಟು 2 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಇವುಗಳಲ್ಲಿ ಒಂದು ಲಸಿಕೆಯನ್ನು ಸಸ್ಯಗಳಲ್ಲಿ ಕಾಣಸಿಗುವ “ಕೌಪಿಯಾ ಮೊಸಾ ಯಿಕ್‌’ ಎಂಬ ವೈರಾಣುವಿನಿಂದ ತಯಾರಿಸಲಾಗಿದೆ. ಮತ್ತೂಂದನ್ನು ಬ್ಯಾಕ್ಟೀರಿಯಾಗಳಿಂದ ಉತ್ಪಾದಿಸಲಾದ “ಕ್ಯುಬೆಟಾ’ ಎಂಬ ವೈರಾಣುವಿನಿಂದ ತಯಾರಿಸಲಾಗಿದೆ ಎಂದು ಈ ಸಂಶೋಧನೆಯ ನೇತೃತ್ವ ವಹಿಸಿದ ಪ್ರೊ| ನಿಕೋಲ್‌ ಸ್ಟೇನ್‌ಮೆಟ್ಸ್‌ ತಿಳಿಸಿದ್ದಾರೆ. ಈ ಲಸಿಕೆಗಳನ್ನು ಶೀತಲಗೃ ಹ ಅಥವಾ ಫ್ರಿಡ್ಜ್ನಲ್ಲಿ ಸಂಗ್ರಹಿಸುವ ಅವಶ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯಾನೋ ಕಣಗಳ ರೂಪದಲ್ಲಿರುವ ಈ ವೈರಾಣುಗಳನ್ನು ಪ್ರತ್ಯೇಕಿಸಿ ಅವುಗಳನ್ನು ಕೊರೊನಾ ವೈರಾಣುವಿನ ಮೇಲಿರುವ ಮೊಳೆಯಂಥ ಪ್ರೋಟೀನ್‌ಗೆ ಸೇರಿಸಿದಾಗ ಇವು ಬೇಗನೇ ಅಪಾರ ಸಂಖ್ಯೆಯಲ್ಲಿ ಬೆಳೆದು, ಲಸಿಕೆಯ ರೂಪವಾಗಿ ಪರಿವರ್ತಿತವಾಗಿದ್ದವು. ಈ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಈ ಲಸಿಕೆಗಳಿಂದ ಕೊರೊನಾ ಸೋಂಕನ್ನು ತಡೆಗಟ್ಟುವ ಶಕ್ತಿಯನ್ನು ಇಲಿಗಳು ಪಡೆದಿವೆ ಎಂದು ನಿಕೋಲ್‌ ಸ್ಟೇನ್‌ಮೆಟ್ಸ್‌ ತಿಳಿಸಿದ್ದಾರೆ.

ಸೋಂಕಿತರಲ್ಲೇ ಹೆಚ್ಚು ಸಾಮರ್ಥ್ಯ :

ಕೊರೊನಾ ಲಸಿಕೆ ಪಡೆದವರಿಗಿಂತ ಕೊರೊನಾ ಸೋಂಕಿ ನಿಂತ ಚೇತರಿಸಿಕೊಂಡವರಲ್ಲಿ, ಕೊರೊನಾದ ಡೆಲ್ಟಾ ಮಾದರಿಯ ವೈರಾಣುವಿನ ಸೋಂಕನ್ನು ತಡೆಗಟ್ಟುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು ಇಸ್ರೇಲ್‌ನ ರಾಜಧಾನಿ ಟೆಲ್‌ ಅವಿವ್‌ನಲ್ಲಿರುವ “ಮಕ್ಕಾಬಿ ಹೆಲ್ತ್‌ ಸರ್ವೀಸಸ್‌’ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ. ಈ ಕುರಿತಂತೆ ಸಂಶೋಧನ ವರದಿಯೊಂದನ್ನು ಅವರು ಸಿದ್ಧಪಡಿಸಿದ್ದು ಅದನ್ನು ತಜ್ಞರ ಅವಗಾಹನೆಗೆ ಕಳುಹಿಸಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next