ನವದೆಹಲಿ: ಉತ್ತರಪ್ರದೇಶದ ಲಕ್ನೋದಲ್ಲಿ 1,500 ಕೋಟಿ ರೂಪಾಯಿ ವೆಚ್ಚದ ಗೋಮತಿ ನದಿ ದಂಡೆ ಅಭಿವೃದ್ಧಿ ಯೋಜನೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಎಸ್ ವೈ ಧೂಳಿಗೆ ಸಮನಿಲ್ಲದವರು ಟೀಕೆ ಮಾಡುತ್ತಿದ್ದಾರೆ: ಸೋಮಶೇಖರ್ ಫುಲ್ ಗರಂ
ಈ ಯೋಜನೆಯನ್ನು ಹಿಂದಿನ ಉತ್ತರಪ್ರದೇಶದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಜಾರಿಗೊಳಿಸಿತ್ತು. ಆದರೆ ಈ ಅಕ್ರಮ ಪ್ರಕರಣದ ಆರೋಪದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೆಸರನ್ನು ಎಫ್ ಐಆರ್ ನಲ್ಲಿ ನಮೂದಿಸಿಲ್ಲವಾಗಿತ್ತು. ಆದರೆ ಇದೀಗ ಯೋಜನೆಗೆ ಸಂಬಂಧಿಸಿದ ಎರಡನೇ ಎಫ್ ಐಆರ್ ನಲ್ಲಿ ಸಿಬಿಐ ಅಖಿಲೇಶ್ ಹೆಸರನ್ನು ದಾಖಲಿಸಿದೆ ಎಂದು ವರದಿ ಹೇಳಿದೆ.
ಗೋಮತಿ ನದಿ ದಂಡೆ ಅಭಿವೃದ್ಧಿ ಅಕ್ರಮ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ರಾಜಸ್ಥಾನ್, ಕೋಲ್ಕತಾ ಸೇರಿದಂತೆ ಉತ್ತರಪ್ರದೇಶದ 40 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಿಯೇ ಸಿಬಿಐ ಗೋಮತಿ ನದಿ ಯೋಜನೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಹೊಸ ಎಫ್ ಐಆರ್ ದಾಖಲಿಸಿದೆ ಎಂದು ವರದಿ ವಿವರಿಸಿದೆ.
ಗೋಮತಿ ನದಿ ಯೋಜನೆಯಲ್ಲಿನ ಮೂವರು ಮುಖ್ಯ ಇಂಜಿನಿಯರ್ಸ್ಸ್ ಮತ್ತು ಆರು ಮಂದಿ ಸೂಪರಿಟೆಂಡೆಂಟ್ ಆಫ್ ಇಂಜಿನಿಯರ್ಸ್ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ. ಸಿಬಿಐ 173 ಖಾಸಗಿ ಹಾಗೂ 16 ಮಂದಿ ಸರ್ಕಾರಿ ನೌಕರರು ಸೇರಿದಂತೆ 189 ಮಂದಿ ಆರೋಪಿಗಳು ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.