ಹೊಸದಿಲ್ಲಿ: ಮಣಿಪುರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗಳು ಮತ್ತು ನಾಗರಿಕರ ಮೇಲೆ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರ ಭೇಟಿಗೆ ಒಂದು ದಿನ ಮುಂಚಿತವಾಗಿ ಘರ್ಷಣೆ ನಡೆದಿದೆ. ಶಾಂತಿ ಸ್ಥಾಪಿಸಲು ಸೈನ್ಯವು ಸಮುದಾಯಗಳ ಶಸ್ತ್ರಾಸ್ತ್ರಗಳನ್ನು ತೊಡೆದುಹಾಕಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘರ್ಷಣೆಗಳು ಭುಗಿಲೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಈಶಾನ್ಯ ರಾಜ್ಯದಲ್ಲಿ ಶಾಂತಿ ನೆಲೆಸುವ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಭದ್ರತಾ ಪಡೆಗಳು ಮನೆಗಳಿಗೆ ಬೆಂಕಿ ಹಚ್ಚುವ ಮತ್ತು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಸುಮಾರು 40 ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಸಶಸ್ತ್ರ ಭಯೋತ್ಪಾದಕರು ಎಕೆ-47, ಎಂ-16 ಮತ್ತು ಸ್ನೈಪರ್ ರೈಫಲ್ ಗಳಿಂದ ನಾಗರಿಕರ ಮೇಲೆ ಗುಂಡು ಹಾರಿಸಿದ ಪ್ರಕರಣಗಳಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?
ಭದ್ರತಾ ಸಿಬ್ಬಂದಿಯ ಸಂಚಾರಕ್ಕೆ ಅಡ್ಡಿಯಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಸಿಂಗ್, “ಸರ್ಕಾರದಲ್ಲಿ ನಂಬಿಕೆ ಮತ್ತು ಭದ್ರತಾ ಪಡೆಗಳನ್ನು ಬೆಂಬಲಿಸುವಂತೆ” ಒತ್ತಾಯಿಸಿದರು. ಇಷ್ಟು ದಿನ ಕಷ್ಟ ಅನುಭವಿಸಿದ್ದೇವೆ, ರಾಜ್ಯ ವಿಘಟನೆಯಾಗಲು ಬಿಡುವುದಿಲ್ಲ ಎಂದರು.
ಈತನ್ಮಧ್ಯೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗೆ ಪರಿಹಾರವನ್ನು ಕಂಡು ಹಿಡಿಯಲು ಅಮಿತ್ ಶಾ ಅವರು ಸೋಮವಾರ ಮಣಿಪುರಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಪರಿಸ್ಥಿತಿಯ ಸ್ಥಳದಲ್ಲೇ ಅಧ್ಯಯನ ನಡೆಸಲಿದ್ದಾರೆ.