Advertisement

ಪ್ಯಾರಿಸ್‌: ಬಹುಮತ ಕಳೆದುಕೊಂಡ ಮ್ಯಾಕ್ರನ್‌

07:25 PM Jun 20, 2022 | Team Udayavani |

ಪ್ಯಾರಿಸ್‌: ಫ್ರಾನ್ಸ್‌ನ ಸಂಸತ್ತಿನ ಎರಡನೇ ಸುತ್ತಿನ ಮತದಾನದ ಫ‌ಲಿತಾಂಶ ಸೋಮವಾರ ಬೆಳಗ್ಗೆ ಹೊರಬಿದ್ದಿದೆ. ಒಟ್ಟು 577 ಮತಗಳಿರುವ ಸಂಸತ್ತಿನಲ್ಲಿ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ನೇತೃತ್ವದ ಮೈತ್ರಿಕೂಟವಾದ ಎನ್ಸೆಂಬಲ್‌ಗೆ 245 ಮತ ಸಿಕ್ಕಿದೆ.

Advertisement

ಬಹುಮತಕ್ಕೆ ಒಟ್ಟು 289 ಮತಗಳು ಬೇಕಿದ್ದು, ಎನ್ಸೆಂಬಲ್‌ಗೆ ಇನ್ನೂ 44 ಮತಗಳು ಬೇಕಿವೆ. ಮತ್ತೂಂದೆಡೆ, ವಿಪಕ್ಷಗಳ ಮೈತ್ರಿಕೂಟವಾದ ಸೋಷಿಯನ್‌ ಯೂನಿಯನ್‌ಗೆ (ನ್ಯೂಪ್ಸ್‌ ) 131 ಮತ ಸಿಕ್ಕಿದೆ. ಇನ್ನು, ನ್ಯಾಷನಲ್‌ ರ್ಯಾಲಿ ಪಕ್ಷಕ್ಕೆ 89 ಮತ ಸಿಕ್ಕಿದೆ.

ಬಹುಮತ ಸಾಬೀತುಪಡಿಸುವಲ್ಲಿ ಕೇವಲ 44 ಮತಗಳಷ್ಟು ಹಿಂದಿರುವ ಮ್ಯಾಕ್ರಾನ್‌, ವಿಪಕ್ಷಗಳಲ್ಲಿರುವ ಸಮಾನ ಮನಸ್ಕರ ಜೊತೆಗೆ ಮಾತುಕತೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next