Advertisement

ಫ್ರೆಂಚ್ ಓಪನ್‌: ಜೊಹಾನ್ನಾ ಕೊಂಟಾ ಸೆಮಿಗೆ

03:08 AM Jun 05, 2019 | sudhir |

ಪ್ಯಾರಿಸ್‌: ಕಳೆದ ವರ್ಷದ ರನ್ನರ್‌ ಅಪ್‌ ಬ್ರಿಟನ್‌ನ ಜೊಹಾನ್ನಾ ಕೊಂಟಾ ಅವರು ಅಮೆರಿಕದ ಸಲೋನೆ ಸ್ಟೀಫ‌ನ್ಸ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿ ಫ್ರೆಂಚ್ ಓಪನ್‌ ಟೆನಿಸ್‌ ಕೂಟದ ಸೆಮಿಫೈನಲ್ ತಲುಪಿದರು.

Advertisement

26ನೇ ಶ್ರೇಯಾಂಕದ ಕೊಂಟಾ 6-1, 6-4 ಸೆಟ್‌ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಅಲ್ಲಿ ಅವರು ಜೆಕ್‌ನ ಹದಿಹರೆಯದ ಮಾರ್ಕೆಟಾ ವಂಡ್ರೋಸೋವಾ ಅಥವಾ ಪೆಟ್ರಾ ಮಾರ್ಟಿಕ್‌ ಅವರನ್ನು ಎದುರಿಸಲಿದ್ದಾರೆ.

28ರ ಹರೆಯದ ಕೊಂಟಾ ಈ ಹಿಂದೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಾಲ್ಕು ಬಾರಿ ಆಡಿದ್ದರೂ ಒಂದೇ ಒಂದು ಪಂದ್ಯ ಗೆದ್ದಿರಲಿಲ್ಲ. ಈ ಬಾರಿ ಸೆಮಿಫೈನಲ್ ತಲುಪಿದ ಅವರು 36 ವರ್ಷಗಳ ಬಳಿಕ ಈ ಸಾಧನೆಗೈದ ಬ್ರಿಟನ್‌ನ ಮೊದಲ ವನಿತೆ ಎಂದೆನಿಸಿಕೊಂಡರು. 1983ರಲ್ಲಿ ಬ್ರಿಟನ್‌ನ ಜೋ ದುರೀ ಫ್ರೆಂಚ್ ಓವನ್‌ನ ಸೆಮಿಫೈನಲ್ ತಲುಪಿದ್ದರು.

ಹಾಲೆಪ್‌ ಕ್ವಾರ್ಟರ್‌ಗೆ

ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ ನಾಲ್ಕನೇ ಬಾರಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ನಾಲ್ಕನೇ ಸುತ್ತಿನ ಹೋರಾಟದಲ್ಲಿ ಅವರು ಪೋಲೆಂಡಿನ ಹದಿಹರೆಯದ ಇಗಾ ಸ್ವೀಟೆಕ್‌ ಅವರನ್ನು 45 ನಿಮಿಷಗಳ ಹೋರಾಟದಲ್ಲಿ 6-1, 6-0 ಸೆಟ್‌ಗಳಿಂದ ಸೋಲಿಸಿದರು.

Advertisement

ಪುರುಷರ ವಿಭಾಗದಲ್ಲಿ ಜರ್ಮನಿಯ ಐದನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ನಾಲ್ಕು ಸೆಟ್‌ಗಳ (3-6, 6-2, 6-2, 7-6 (7-5) ಕಠಿನ ಸೆಣಸಾಟದಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು. ಅಂತಿಮ ಎಂಟರ ಸುತ್ತಿನಲ್ಲಿ ಅವರು ವಿಶ್ವದ ನಂಬರ್‌ ವನ್‌ ನೊವಾಕ್‌ ಜೊಕೋವಿಕ್‌ ಅವರನ್ನು ಎದುರಿಸುವವರಿದ್ದಾರೆ.

ಜೊಕೋವಿಕ್‌ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ಅವರನ್ನು 6-3, 6-2, 6-2 ಸೆಟ್‌ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next