Advertisement
ತವರಿನ ಕ್ಯಾರೋಲಿನ್ ಗಾರ್ಸಿಯ, ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ಕೂಡ ಮುನ್ನಡೆಗೈದಿದ್ದಾರೆ. ಇದೇ ವೇಳೆ 16ನೇ ಶ್ರೇಯಾಂಕದ ಡಚ್ ಆಟಗಾರ್ತಿ ಕಿಕಿ ಬರ್ಟೆನ್ಸ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಅವರನ್ನು ಸ್ಲೊವೇನಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಪೊಲೋನಾ ಹರ್ಕೋಗ್ 6-1, 3-6, 6-4ರಿಂದ ಮಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೇವ್, ಇಟಲಿಯ ಜಾನಿಕ್ ಸಿನ್ನರ್, ಅಮೆರಿಕದ ಜಾನ್ ಇಸ್ನರ್ ದ್ವಿತೀಯ ಸುತ್ತು ಪ್ರವೇಶಿಸಿದರು. ರಶ್ಯದ ಮೆಡ್ವೆಡೇವ್ 6-3, 6-3, 7-5 ಅಂತರದಿಂದ ತಮ್ಮದೇ ದೇಶದ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು ಮಣಿಸಿದರು.