ಪ್ಯಾರಿಸ್: ವಿಂಬಲ್ಡನ್ ಚಾಂಪಿಯನ್ ಜೆಕ್ ಗಣರಾಜ್ಯದ ಎಲೆನಾ ರಿಬಕಿನಾ, 22 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರು ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ನಾಲ್ಕನೇ ಶ್ರೇಯಾಂಕದ ರಿಬಕಿನಾ ತನ್ನದೇ ದೇಶದ 18ರ ಹರೆಯದ ಲಿಂಡಾ ನೋಸ್ಕೋವಾ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಈ ಪಂದ್ಯ ಸುಲಭವಾಗಿತ್ತೆಂದು ಹೇಳುವುದಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ನಾವು ಉತ್ತಮವಾಗಿ ಹೋರಾಡಬೇಕಾಗು ತ್ತದೆ ಎಂದು ಪಂದ್ಯದ ಬಳಿಕ ರಿಬಕಿನಾ ಹೇಳಿದರು.
ಮೊದಲ ಸುತ್ತಿನಲ್ಲಿ ಬ್ರೆಂಡಾ ಫ್ರುವಿಟೋìವಾ ಅವರನ್ನು ಕೆಡಹಿದ್ದ ರಿಬ ಕಿನಾ ಮುಂದಿನ ಸುತ್ತಿನಲ್ಲಿ ಸ್ಪೇಯ್ನನ ಸಾರಾ ಸೊರಿಬೆಸ್ ಟೊರ್ಮೊ ಅವರ ಸವಾಲನ್ನು ಎದುರಿ ಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಎಲೆನಾ ಸ್ವಿಟೋಲಿನಾ ಅವರು ಸ್ಟಾರ್ಮ್ ಸ್ಯಾಂಡರ್ ಅವರನ್ನು 2-6, 6-3, 6-1 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು.
74 ಅನಗತ್ಯ ತಪ್ಪು ಮಾಡಿದ ಅಮೆರಿಕದ ಮ್ಯಾಡಿಸನ್ ಕೀಸ್ ಅವರು ತನ್ನದೇ ದೇಶದ ಕೈಲಾ ಡೇ ಅವರಿಗೆ 6-2, 4-2, 6-4 ಸೆಟ್‌ಗಳಿಂದ ಸೋಲನ್ನು ಕಂಡು ಹೊರಬಿದ್ದರು. 2016ರ ಯುಎಸ್ ಓಪನ್ ವೇಳೆ ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದ್ದ 23ರ ಹರೆಯದ ಡೇ ಅವರು ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಫ್ರೆಂಚ್‌ನ ಕ್ರಿಸ್ಟಿನಾ ಮಡೆ ನೋವಿಕ್ ಅವರನ್ನು ಕೆಡಹಿದ್ದರು.
Related Articles
ಜೊಕೋವಿಕ್‌ಗೆ ಜಯ
ಪುರುಷರ ವಿಭಾಗದಲ್ಲಿ ಜೊಕೋ ವಿಕ್ ಅವರು 7-6 (2), 6-0, 6-3 ಸೆಟ್‌ಗಳಿಂದ ಮಾರ್ಟನ್ ಪುಸ್ಕೋವಿಕ್ಸ್ ಅವರನ್ನು ಸೋಲಿಸಿ ಮುನ್ನಡೆದಿ ದ್ದಾರೆ. ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಆರ್ಜೆಂಟೀನಾದ ಥಾಮಸ್ ಮಾರ್ಟಿನ್ ಅವರಿಗೆ 6-3, 7-6 (2, 6-3 ಸೆಟ್‌ಗಳಿಂದ ಶರಣಾದರು.
ಹಿಂದೆ ಸರಿದ ಮೊನ್‌ಫಿಲ್ಸ್
ಮಣಿಕಟ್ಟಿನ ಗಾಯದಿಂದ ಫ್ರೆಂಚ್ ಓಪನ್‌ನಿಂದ ಗೈಲ್ ಮೊನ್‌ಫಿಲ್ಸ್ ಹಿಂದೆ ಸರಿದಿದ್ದಾರೆ. ಇದ ರಿಂದಾಗಿ ದ್ವಿತೀಯ ಸುತ್ತಿನಲ್ಲಿ ಅವರ ಎದುರಾಳಿಯಾಗಿದ್ದ 6ನೇ ಶ್ರೇಯಾಂಕದ ಹೋಲ್ಕರ್ ರೂನ್ ಅವರು ಮೂರನೇ ಸುತ್ತಿಗೆ ವಾಕ್ ಓವರ್ ಪಡೆದರು. ಈ ಮೊದಲು ಮೊನ್‌ಫಿಲ್ಸ್ ಮೊದಲ ಸುತ್ತಿನಲ್ಲಿ ಐದು ಸೆಟ್‌ಗಳ ಮ್ಯಾರಥಾನ್ ಹೋರಾಟಲ್ಲಿ ಸೆಬಾಸ್ಟಿಯನ್ ಬೇಜ್ ಅವರನ್ನು ಸೋಲಿಸಿದ್ದರು.