Advertisement

Badminton: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ : ಸಿಂಧು ಕ್ವಾರ್ಟರ್‌ಫೈನಲಿಗೆ

11:03 PM Mar 07, 2024 | Team Udayavani |

ಪ್ಯಾರಿಸ್‌: ಶ್ರೇಷ್ಠ ಮಟ್ಟದ ಆಟದ  ಪ್ರದರ್ಶನ ನೀಡಿದ ಭಾರತದ ಪಿ.ವಿ. ಸಿಂಧು ಅವರು ಅಮೆರಿಕದ ಬೈವೆನ್‌ ಝಾಂಗ್‌ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಗೆಲುವು ಸಾಧಿಸಿ ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಕೂಟದ ವನಿತೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಮೊಣಕಾಲಿನ ಗಾಯದಿಂದ ಚೇತರಿ ಸಿಕೊಂಡ ಬಳಿಕ ಮೊದಲ ಬಿಡಬ್ಲ್ಯುಎಫ್ ಟೂರ್‌ ಕೂಟದಲ್ಲಿ ಆಡಿದ ಸಿಂಧು ಅವರು ಝಾಂಗ್‌ ಅವರನ್ನು 13-21, 21-10, 21-14 ಗೇಮ್‌ಗಳಿಂದ ಉರುಳಿಸಿ ಈ ಋತುವಿನಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲಿಗೇರಿದರು.

ಶ್ರೀಕಾಂತ್‌ಗೆ ಸೋಲು

ಭಾರತದ ಕಿದಂಬಿ ಶ್ರೀಕಾಂತ್‌ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಚೀನದ ಗುವಾಂಗ್‌ ಝು ಅವರೆದುರು ಸೋತು ನಿರಾಶೆಗೊಂಡರು. ಈ ಹಿಂದೆ ಅವರೆದುರು ಆಡಿದ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಶ್ರೀಕಾಂತ್‌ ಈ ಬಾರಿ 21-19, 12-21, 20-22 ಗೇಮ್‌ಗಳಿಂದ ಸೋತು ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next