Advertisement
ಮುಗುರುಜಾ ಮುನ್ನಡೆಮಳೆಯಿಂದ ತೊಂದರೆಗೊಳ ಗಾದ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಗಾರ್ಬಿನ್ ಮುಗುರುಜಾ ಮಾಜಿ ಚಾಂಪಿಯನ್ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 7-6 (7-0), 6-2 ಸೆಟ್‌ಗಳಿಂದ ಮಣಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಮುಗು ರುಜಾ ಫ್ರಾನ್ಸ್‌ನ ವೈಲ್ಡ್ ಕಾರ್ಡ್ ಫಿಯೊನಾ ಫೆರೊ ಅವರನ್ನು ಎದುರಿಸಲಿದ್ದಾರೆ. ಮಾಜಿ ಚಾಂಪಿಯನ್‌ಗಳ ನಡುವಣ ಈ ಸಮರದಲ್ಲಿ ಕುಜ್ನೆತ್ಸೋವಾ ನೀರಸವಾಗಿ ಆಡಿದರು. 2009ರ ಚಾಂಪಿಯನ್ ಕುಜ್ನೆತ್ಸೋವಾ ಕೈಯ ಗಾಯದಿಂದಾಗಿ ಕಳೆದ ಮಾರ್ಜ್‌ನಲ್ಲಿ ಟೆನಿಸ್ ಕಣಕ್ಕೆ ಮರಳಿದ್ದರು. ಆದರೆ ಮುಗುರುಜಾ ಅವರ ಹೊಡೆತಕ್ಕೆ ಉತ್ತರಿಸಲು ಅವರು ವಿಫಲರಾದರು.
ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರ ಕಠಿನ ಸವಾಲನ್ನು ದಿಟ್ಟವಾಗಿ ಎದುರಿಸಿ ಗೆಲುವಿನ ನಗೆ ಚೆಲ್ಲಲು ಸಮರ್ಥರಾದರು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ವೋಜ್ನಿಯಾಕಿ ಇಲ್ಲಿ ಒಮ್ಮೆಯೂ ಸೆಮಿಫೈನಲ್ ತಲುಪಿಲ್ಲ. ಮೊದಲ ಸೆಟ್‌ನಲ್ಲಿ ಇಬ್ಬರೂ ಪ್ರಬಲ ಹೋರಾಟ ಸಂಘಟಿಸಿದ್ದರು. 7-6 (7-2) ಅಂತರದಿಂದ ಗೆದ್ದ ವೋಜ್ನಿಯಾಕಿ ದ್ವಿತೀಯ ಸೆಟ್‌ನಲ್ಲಿ 6-1ರಿಂದ ಸುಲಭವಾಗಿ ಗೆಲುವು ಪಡೆದರು. ವೋಜ್ನಿಯಾಕಿ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಅರ್ಹತಾ ಆಟಗಾರ್ತಿ ಜಾರ್ಜಿನಾ ಗಾರ್ಸಿಯಾ ಪೆರೆಜ್ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಇಲ್ಲಿ ವೋಜ್ನಿಯಾಕಿ ಪ್ರಶಸ್ತಿ ಗೆದ್ದರೆ ಅವರು ಸಿಮೋನಾ ಹಾಲೆಪ್ ಅವರಿಂದ ವಿಶ್ವದ ನಂಬರ್ ವನ್ ಪಟ್ಟವನ್ನು ಕಸಿದುಕೊಳ್ಳಲಿದ್ದಾರೆ.