Advertisement

ಫ್ರೆಂಚ್‌ ಓಪನ್‌ಗೆ 1200 ಭದ್ರತಾ ಸಿಬ್ಬಂದಿ

11:30 AM May 25, 2017 | Team Udayavani |

ಪ್ಯಾರಿಸ್‌: ಮ್ಯಾಂಚೆಸ್ಟರ್‌ನಲ್ಲಿ ಆತ್ಮಾಹುತಿ ದಾಳಿ ನಡೆದು 22 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಮುಂಬರುವ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟಕ್ಕೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಒಟ್ಟು 1,200 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುತ್ತಿರುವುದಾಗಿ ಕೂಟದ ಭದ್ರತಾ ಮುಖ್ಯಸ್ಥ ಜಾಕ್ವೆಸ್‌ ಲೆ ಮೆನ್‌ ತಿಳಿಸಿದ್ದಾರೆ. ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೀವಿ. ನಮ್ಮಲ್ಲಿ ನುರಿತ ಭದ್ರತಾ ಸಿಬ್ಬಂದಿಗಳು ಇದ್ದಾರೆ. ಕಳೆದ ವರ್ಷ ನಾವು ಕೂಟಕ್ಕೆ ಭದ್ರತೆ ನೀಡಿ ಯಶಸ್ವಿಯಾಗಿದ್ದೇವೆ. ಅದೇ ಸ್ಫೂರ್ತಿಯನ್ನು ಪಡೆದು ಕರ್ತವ್ಯ ನಿರ್ವಹಿಸಲಿದ್ದೇವೆ ಎಂದು ಜಾಕ್ವೆಸ್‌ ತಿಳಿಸಿದ್ದಾರೆ.

Advertisement

ಫೆಡರರ್‌, ಸೆರನಾ ಅನುಪಸ್ಥಿತಿ: ಈ ವರ್ಷದ ಫ್ರೆಂಚ್‌ ಓಪನ್‌ನಲ್ಲಿ ವಿಶ್ವಶ್ರೇಷ್ಠ ಟೆನಿಸ್‌ ಆಟಗಾರರಾದ ರೋಜರ್‌ ಫೆಡರರ್‌, ಸೆರೆನಾ ವಿಲಿಯಮ್ಸ್‌ ಆಡುವುದಿಲ್ಲ. ಜೊತೆಗೆ ವೈಲ್ಡ್‌ ಕಾರ್ಡ್‌ ಸಿಗದಿರುವುದರಿಂದ ಮರಿಯಾ ಶರಪೋವಾ ಏನು ಮಾಡುತ್ತಾರೆನ್ನುವುದು ಇನ್ನೂ ಖಚಿತವಾಗಿಲ್ಲ. ಫ್ರೆಂಚ್‌ ಓಪನ್‌ ಟೆನಿಸ್‌ ಭಾನುವಾರದಿಂದ ಆರಂಭವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next