Advertisement

ದೀರ್ಘಾಯಸ್ಸಿನ ಗುಟ್ಟು ಬಿಟ್ಟುಕೊಟ್ಟ ಅಜ್ಜಿ!

09:48 AM Apr 28, 2022 | Team Udayavani |

ಪ್ಯಾರಿಸ್‌: ವಿಶ್ವದ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಕಾನೆ ತನಾಕಾ ಮೃತಪಟ್ಟ ಬೆನ್ನಲ್ಲೇ, ಆ ಸ್ಥಾನಕ್ಕೇರಿರುವ ಫ್ರಾನ್ಸ್‌ನ ಸಿಸ್ಟರ್‌ ಆ್ಯಂಡ್ರೆ ತಮ್ಮ ದೀರ್ಘ‌ ಆಯಸ್ಸಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

Advertisement

118 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ಆ್ಯಂಡ್ರೆ ಅವರು ಪ್ರತಿದಿನ ವೈನ್‌ ಹಾಗೂ ಚಾಕೋಲೇಟ್‌ ಸೇವಿಸುತ್ತಾರಂತೆ. ಅದರಿಂದಾಗಿ ಅವರ ಆರೋಗ್ಯಯುತರಾಗಿದ್ದಾರಂತೆ.

ಗಿನ್ನೆಸ್‌ ರೆಕಾರ್ಡ್‌ ಹೇಳಿರುವ ಪ್ರಕಾರ ಆ್ಯಂಡ್ರೆ ಅವರು 1904ರ ಫೆ.11ರಂದು ಜನಿಸಿದ್ದಾರೆ. ಮೊದಲ ವಿಶ್ವ ಯುದ್ಧದ ಸಮಯದಲ್ಲಾಗಲೇ ಹುಟ್ಟಿದ್ದ ಅವರು 2ನೇ ವಿಶ್ವ ಯುದ್ಧದ ಸಮಯದಲ್ಲಿ ಕ್ರೈಸ್ತ ಸನ್ಯಾಸಿನಿಯಾಗಿ ದೀಕ್ಷೆ ತೆಗೆದುಕೊಂಡರು.

2021ರಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತಾದರೂ ಅವರಿಗೆ ಅದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next