Advertisement

ಆರ್‌ಆರ್‌ಆರ್‌ “ನಾಟು’ಹಾಡಿಗೆ ಫ್ರೆಂಚರ ಹೆಜ್ಜೆ!

12:42 AM Dec 13, 2021 | Team Udayavani |

ಆರ್‌ಆರ್‌ಆರ್‌ ಚಿತ್ರದ “ನಾಟು ನಾಟು’ ಹಾಡು ಇತ್ತೀಚೆಗೆ ಭಾರೀ ವೈರಲ್‌ ಆಗಿರುವುದು ಎಲ್ಲರಿಗೂ ತಿಳಿದ ವಿಷಯ.

Advertisement

ಸಾಮಾಜಿಕ ಜಾಲತಾಣಗಳ ತುಂಬೆಲ್ಲ ನಾಟು ಹಾಡಿಗೆ ಹೆಜ್ಜೆ ಹಾಕುವ ಜೋಡಿಯೇ ಕಾಣಿಸುತ್ತಿತ್ತು. ಈಗ ಆ ನೃತ್ಯಕ್ಕೆ ಭಾರತೀಯರು ಮಾತ್ರವಲ್ಲದೆ ವಿದೇಶಿಗರೂ ಮಾರು ಹೋಗಿದ್ದಾರೆ.

ಫ್ರೆಂಚ್‌ನ ಜಿಕಾ ಹೆಸರಿನ ವ್ಯಕ್ತಿ ತನ್ನ ಸ್ನೇಹಿತ ಯೂನ್ಸ್‌ ಜತೆ ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ.

ಆ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್‌ ಮಾಡಿದ್ದಾರೆ.

ಆ ವೀಡಿಯೋಗೆ ಭಾರತೀಯರು ಮತ್ತು ವಿದೇಶಿಗರಿಂದ ಅಪಾರ ಪ್ರಮಾಣದ ಮೆಚ್ಚುಗೆಯ ಕಾಮೆಂಟ್‌ಗಳೂ ಹರಿದುಬಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next