ಪ್ಯಾರಿಸ್ : ಫ್ರೆಂಚ್ ಆಲ್ಪ್ಸ್‌ನಲ್ಲಿರುವ ಅನ್ನೆಸಿ ಪಟ್ಟಣದಲ್ಲಿ ದುಷ್ಕರ್ಮಿಯೊಬ್ಬ ಮನಬಂದಂತೆ ಚಾಕು ದಾಳಿ ನಡೆಸಿದ್ದು ಎಂಟು ಚಿಕ್ಕ ಮಕ್ಕಳು ಮತ್ತು ವಯಸ್ಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಫ್ರೆಂಚ್ ಪೊಲೀಸರು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಮಕ್ಕಳೆಲ್ಲರೂ ಸರಿ ಸುಮಾರು ಮೂರು ವರ್ಷ ಪ್ರಾಯದವರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಉದ್ಯಾನವನದಲ್ಲಿ ದಾಳಿ ನಡೆದಿದೆ ಎಂದು ಬಿಎಫ್‌ಎಂ ಟಿವಿ ವರದಿ ಮಾಡಿದೆ ಮತ್ತು ದಾಳಿಕೋರ ಸಿರಿಯಾ ಮೂಲದ ನಿರಾಶ್ರಿತ ಎಂದು ತಿಳಿದುಬಂದಿದೆ.