Advertisement

ಸಂವಿಧಾನದಿಂದ ಶೋಷಿತರಿಗೆ ಸ್ವಾತಂತ್ರ್ಯ

03:36 PM Apr 15, 2021 | Team Udayavani |

ರಾಮನಗರ: ಭಾರತಕ್ಕೆ 1947ರಲ್ಲಿ ಪರ ಕೀ ಯರಿಂದ ಸ್ವಾತಂತ್ರ್ಯ ದೊರಕಿತು. ಆದರೆ, ಇಲ್ಲಿನಶೋಷಿ ತ ರಿ ಗೆ ಅಸ್ಪೃಶ್ಯತೆಯಿಂದ ಸ್ವಾತಂತ್ರ್ಯನೀಡಿದ್ದು ಸಂವಿಧಾನ. ಡಾ.ಬಿ. ಆ ರ್‌. ಅಂಬೇಡ್ಕರ್‌. ಸಂವಿಧಾನವನ್ನು ಅರ್ಥ ಮಾಡಿ ಕೊಂಡುಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯಎಂದು ಜಿಲ್ಲಾ ಧಿ ಕಾರಿ ಡಾ.ರಾ ಕೇಶ್‌ ಕುಮಾ ರ್‌.ಕೆ. ಹೇಳಿ ದರು.

Advertisement

ನಗರದಲ್ಲಿರುವ ಜಿಲ್ಲಾ ಕಚೇ ರಿ ಗಳ ಸಂಕೀರ್ಣದಲ್ಲಿ ಜಿಲ್ಲಾ ಡ ಳಿತ ಹಮ್ಮಿ ಕೊಂಡಿದ್ದ ಡಾ.ಬಿ. ಆ ರ್‌.ಅಂಬೇ ಡ್ಕರ್‌ ಅವರ 130ನೇ ಜಯಂತಿ ಯಲ್ಲಿಮಾತನಾಡಿ ದರು. ಶಿಕ್ಷಣವೇ ಅಭಿವೃದ್ಧಿಯಮೂಲ ಮಂತ್ರ. ಜೀವನದ ಸಂಕಷ್ಟಕ್ಕೆ ದಾರಿಕಂಡು ಕೊ ಳ್ಳಲು ಶಿಕ್ಷಣ ಸಹ ಕ ರಿ ಸು ತ್ತದೆ ಎಂದುನಂಬಿದ್ದ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರುಜ್ಞಾನಾರ್ಜನೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು.

ಆಧುನಿಕ ಭಾರತವನ್ನು ಜಾತಿ ಮತ್ತುಮೇಲು- ಕೀಳುಗಳಂಥ ವ್ಯವಸ್ಥೆಯನ್ನು ಮೀರಿಕಟ್ಟುವ ಹಾಗೂ ಸಮಾನತೆಯನ್ನುಎತ್ತಿಹಿಡಿಯುವ ಮೂಲಕ ಸಮಾ ನತೆಯಕನಸನ್ನು ಕಂಡಿದ್ದರು. ದೇಶದಲ್ಲಿ ಅಸ್ಪೃಶ್ಯತೆಯನ್ನು ದೂರಮಾಡಲು ಶ್ರಮಿಸಿದರು ಎಂದರು.

ಸಮಯವೆಂದರೆ ಜ್ಞಾನಾರ್ಜನೆ: ಅಪರಜಿಲ್ಲಾಧಿಕಾರಿ ಜವರೇಗೌಡ ಟಿ ಅವರುಮಾತನಾಡಿ ಡಾ. ಬಿ.ಆರ್‌. ಅಂಬೇಡ್ಕರ್‌ಬಾಲ್ಯದಲ್ಲಿ ಅಸಮಾನತೆ ಪಿಡುಗನ್ನುಎದುರಿಸಿದಾಗ ಅವರು ಮೊದಲು ಸದಾ ಜ್ಞಾನಪಡೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಇದಕ್ಕೆ ಸಹಾಯಕವಾಗಿ ನಿಂತ ಅವರ ತಂದೆಅವರಿಗೆ ಬಹಳಷ್ಟು ಪುಸ್ತಕಗಳನ್ನುಗ್ರಂಥಾಲಯದಿಂದ ತಂದು ಕೊಡುತ್ತಿದ್ದರು.

ಅವರ ತಂದೆ ಅವರಿಗೆ ವಿದ್ಯಾಭ್ಯಾಸಕ್ಕೆ ನೀಡಿದಪೂರಕ ವಾತಾವರಣ ಅವರನ್ನು ಮಹಾನ್‌ವ್ಯಕ್ತಿಯಾಗಿ ರೂಪಿಸಿತು. ಪೋಷಕರು ತಮ್ಮಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆನೀಡಬೇಕು ಎಂದರು. ಕೆಲ ವ ರಿ ಗೆ ಸಮಯಎಂದರೆ ಹಣ, ಅಂಬೇಡ್ಕರ್‌ ಅವರಿಗೆ ಸಮಯಎಂದರೆ ಜ್ಞಾನಾರ್ಜನೆ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ಮಾತನಾಡಿದರು. ಜಿಪಂ ಸಿಇಒ ಇಕ್ರಂ, ಉಪವಿಭಾಗಾಧಿಕಾರಿ ಮಂಜುನಾಥ್‌, ನಗರಸಭೆಆಯುಕ್ತ ನಂದ ಕುಮಾರ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next