Advertisement

ಸ್ವಾತಂತ್ರ್ಯಕ್ಕೆ ಹೋರಾಡಿದ ಧೀರರು

02:23 PM Aug 15, 2021 | Adarsha |

ಮುದ್ದೇಬಿಹಾಳ: ದೇಶ ಇಂದು 75ನೇ ಸ್ವಾತಂತ್ರೊÂàತ್ಸವಸುವರ್ಣ ಮಹೋತ್ಸವ ಆಚರಿಸುತ್ತಿರುವಾಗ ನಮಗೆಸ್ವಾತಂತ್ರÂ ತಂದುಕೊಡಲು ಹೋರಾಡಿದ ನಮ್ಮ ಭಾಗದಧಿಧೀರ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆಅಗತ್ಯ. ಇದು ಯುವ ಪೀಳಿಗೆಗೆ ಪ್ರೇರಣಾತ್ಮವೂ ಅಗಬಹುದು. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಅವಿಭಜಿತ ಮುದ್ದೇಬಿಹಾಳ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕಿರುಪರಿಚಯ ಇಲ್ಲಿದೆ.

Advertisement

ಗಾಂಧಿಧೀಜಿಯೇ ಪ್ರೇರಣೆ:1919ರಲ್ಲಿ ನಡೆದಕಾಯ್ದೆಭಂಗ ಚಳವಳಿ,1921ರ ಅಸಹಕಾರ ಚಳವಳಿ,1930ರ ಉಪ್ಪಿನ ಸತ್ಯಾಗ್ರಹ,1942ರ ಬ್ರಿಟೀಷರೇ ಭಾರತಬಿಟ್ಟು ತೊಲಗಿ (ಕ್ವಿಟ್‌ಇಂಡಿಯಾ) ಮುಂತಾದಪ್ರಮುಖ ಹೋರಾಟಗಳು ಈಭಾಗದಲ್ಲೂ ಸ್ವಾತಂತ್ರÂದ ಕಿಡಿಹಚ್ಚಿದ್ದವು. 1920ರಲ್ಲಿ ಗಾಂಧಿàಜಿಯವರು ಹುಬ್ಬಳ್ಳಿ ಭಾಗಕ್ಕೆಬಂದು ಸ್ವಾತಂತ್ರÂದ ಕಿಚ್ಚನ್ನುಯುವಕರ ಹೊತ್ತಿಸಿದ್ದರು.

ಇದರಿಂದ ಪ್ರೇರಣೆ ಪಡೆದ ಈ ಭಾಗದ ಕೆಲವರುತಮ್ಮದೇ ರೀತಿಯಲ್ಲಿ ಸ್ವಾತಂತ್ರ ಚಳವಳಿಯಲ್ಲಿಧುಮಿಕಿದರು. ನಮ್ಮ ಭಾಗದವರು ಇಲ್ಲಿಂದ ಉಪ್ಪನ್ನುಒಯ್ದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡದ್ದುಅವಿಸ್ಮರಣೀಯ. ನಮ್ಮ ಭಾಗದ ಹೋರಾಟಗಾರರಿಗೆಗಾಂಧೀಜಿಯೇ ಪ್ರೇರಣೆ ಎನ್ನುವುದರಲ್ಲಿ ಎರಡುಮಾತಿಲ್ಲ ಎಂದು ತಾಳಿಕೋಟೆ ತಾಲೂಕು ಪತ್ತೇಪುರಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕದೇವರಾಜ ಬಾಗೇವಾಡಿ ನೆನಪಿಸಿಕೊಳ್ಳುತ್ತಾರೆ.

ಹೋರಾಟಗಾರರು: ಈ ಭಾಗದ ಸ್ವಾತಂತ್ರÂಹೋರಾಟಗಾರರಲ್ಲಿ ಪ್ರಮುಖವಾಗಿ ಕೇಳಿ ಬರುವಹೆಸರುಗಳೆಂದರೆ ತಮ್ಮಾಜಪ್ಪ ಮಿರಜಕರ, ಬಾವಾಸಾಬಮಕಾನದಾರ, ರೇವಣಸಿದ್ದಯ್ಯ ಲದ್ದಿಮಠ, ಎಸ್‌.ಎಸ್‌. ನಾಯನೇಗಲಿ, ರಾಚಯ್ಯ ಉಳ್ಳೆಪ್ಪನಮಠ,ರಾಮಸಿಂಗ್‌ ಹಜೇರಿ, ಗುರುನಾಥ ಪುಕಾಳೆ, ಶ್ರೀಶೈಲಪ್ಪಮಸಳಿ, ನರಸಿಂಗಪ್ಪ ಕಪಟಕರ, ಭೀಮರಾಯ ಗೋಗಿ,ಶಿವಲಿಂಗಪ್ಪ ಸಾಳಂಕಿ, ಗುಂಡಪ್ಪಗೌಡದ್ಯಾಪುರ, ತುಳಜಾರಾಮ ಉತ್ತರಕರ, ಸಿದ್ದಪ್ಪಸಜ್ಜನ, ಬಿ.ಎಚ್‌. ಮಾಗಿ ಮುಂತಾದವರದ್ದು.

ಪ್ರಮುಖರ ಕಿರು ಪರಿಚಯ: ತಮ್ಮಾಜಪ್ಪ ಮಿರಜಕರಅವರದ್ದು ಮರಾಠಿ ಮಾತೃ ಭಾಷೆಯವರಾಗಿದ್ದರೂಕನ್ನಡದಲ್ಲಿ ಮುಲ್ಕಿ ಪರೀಕ್ಷೆ ಬರೆದವರು. 1920ರಲ್ಲಿ ಗಾಂಧೀಜಿಯವರು ಹುಬ್ಬಳ್ಳಿಗೆ ಬಂದಾಗ ಪ್ರಭಾವಿತರಾಗಿ1924ರಲ್ಲಿ ಬೆಳಗಾವಿ ಅ ಧಿವೇಶನದಲ್ಲಿ ಪಾಲ್ಗೊಂಡುಸೈಮನ್‌ ಕಮಿಷನ್‌ ವಿರುದ್ಧ ಪ್ರತಿಭಟಿಸಿದ್ದರು.1930ರಲ್ಲಿ ಸಿಂ ಧಿ ಗಿಡ ಕಡಿದು ಪೊಲೀಸರಿಂದಬಂಧನಕ್ಕೊಳಗಾದರು. 1931ರಲ್ಲಿ ಹುಬ್ಬಳ್ಳಿಯಲ್ಲಿನಿಷೇಧಾಜ್ಞೆ ಜಾರಿಯಲ್ಲಿದ್ದಾಗ 15 ತರುಣರೊಂದಿಗೆಪಿಕೇಟಿಂಗ್‌ ನಡೆಸಿ 55 ದಿನದ ಜೈಲು ಶಿಕ್ಷೆ, 1932ರಲ್ಲಿಗಾಂ ಧೀಜಿ ಬಂಧನವಾದಾಗ ಪ್ರತಿಭಟಿಸಿ ಮತ್ತೇಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

Advertisement

ಮೂಲತಃ ತಾಳಿಕೋಟೆಯವರಾಗಿದ್ದ ಇವರು 1944ರನಂತರ ಉಪ ಜೀವನಕ್ಕಾಗಿ ಮುದ್ದೇಬಿಹಾಳಕ್ಕೆ ಬಂದುನೆಲೆಸಿದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯ ದೊರೆತಾಗಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು.ರೇವಣಸಿದ್ದಯ್ಯ ಲದ್ದಿಮಠರು ಕೂಡಾಮಿರಜಕರ ಅವರಂತೆ ಅಪ್ಪಟ ಗಾಂ ಧಿವಾದಿಹೋರಾಟಗಾರರಾಗಿದ್ದರು. ಗಾಂಧಿಧೀಜಿಯವರಿಂದಪ್ರಭಾವಿತರಾಗಿ ಸಿಂ ಧಿ ಮರಗಳನ್ನು ಕಡಿದು ಜೈಲುವಾಸಅನುಭವಿಸಿದ್ದರು. ಉಪ್ಪಿನ ಸತ್ಯಾಗ್ರಹದಲ್ಲೂಪಾಲ್ಗೊಂಡಿದ್ದರು. ಸ್ವದೇಶಿ ಆಂದೋಲನದಲ್ಲಿಇವರದ್ದು ಮಹತ್ವದ ಪಾತ್ರವಾಗಿತ್ತು.ಹಳ್ಳಿ ಹಳ್ಳಿಗೆ ಸುತ್ತಿ ಸ್ವದೇಶಿ ಬಟ್ಟೆ ಬಳಕೆಯಪ್ರಚಾರದಲ್ಲಿ ತೊಡಗಿದ್ದರು.

ಇವರ ಮಕ್ಕಳುಇಂದಿಗೂ ಬಟ್ಟೆ ಅಂಗಡಿ ನಡೆಸುತ್ತಿರುವುದುಇದಕ್ಕೆ ಉದಾಹರಣೆಯಾಗಿದೆ. ರಾಷ್ಟ್ರೀಯ ಸ್ವಾತಂತ್ರÂಆಂದೋಲನ, ಅಸಹಕಾರ ಚಳವಳಿಯಲ್ಲಿ ಇವರದ್ದೂಪಾಲಿತ್ತು. ಸ್ವಾತಂತ್ರ ಹೋರಾಟಕ್ಕಾಗಿ ಯುವ ಪಡೆಯನ್ನುಸಜ್ಜುಗೊಳಿಸುವ ಉತ್ಸಾಹ ಹೊಂದಿದವರಾಗಿದ್ದರು.ಇವರಂತೆ ಬಾವಾಸಾಬ ಮಕಾನದಾರ, ಸಿದ್ಲಿಂಗಪ್ಪನಾಯನೇಗಲಿ ಸಹಿತ ಜೈಲುವಾಸ ಅನುಭವಿಸಿಸ್ವಾತಂತ್ರÂದ ಕಿಚ್ಚಿಗೆ ತಮ್ಮ ಕೊಡುಗೆ ನೀಡಿದ್ದರು. ಬಿ.ಎಚ್‌.ಮಾಗಿಯವರು ಗೋವಾ ವಿಮೋಚನಾ ಚಳವಳಿಯಲ್ಲಿಭಾಗಿಯಾಗಿ ಹೋರಾಟದ ಬಿಸಿ ಎದುರಿಸಿದ್ದರು.ಇವರೊಂದಿಗೆ ಆಗಿನ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದಹಲವರು ತಾವಿದ್ದಲ್ಲಿಯೇ ದೇಶದ ಸ್ವಾತಂತ್ರÂಕ್ಕಾಗಿಅಳಿಲು ಸೇವೆ ಸಲ್ಲಿಸಿ ಎಲೆಮರೆ ಕಾಯಿಯಂತೆ ಇದ್ದದ್ದುಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ.

ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next