Advertisement

ಉಚಿತ ಯೋಗ ತರಬೇತಿ ಮತ್ತು ಮಾಹಿತಿಗೆ ಮುಂದಾದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಜಿ

11:57 AM May 28, 2021 | Team Udayavani |

ಸುಳ್ಯ:  ಶ್ವಾಸಕೋಶಕ್ಕೆ ಸಂಬಂಧಪಟ್ಟ ಕೊರೋನಾದಂತಹ ರೋಗಗಳನ್ನು ‌ನಿತ್ಯ ನಿಯಮಿತವಾದ ಪ್ರಾಣಾಯಮ ಮಾಡುವುದರಿಂದ ದೂರ ಮಾಡಬಹುದು.ಮನುಷ್ಯನ ಆರೋಗ್ಯ ವ್ರದ್ದಿಸಿಕೊಳ್ಳಲು ಯೋಗಗಳು ಸಹಕಾರಿಯಾಗಿದೆ ಎಂದು ಹೇಳುವ  ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಜಿಯವರು ಉಚಿತ ಯೋಗ ಮಾಹಿತಿ ಮತ್ತು ತರಬೇತಿ ನೀಡಲು ಮುಂದಾಗಿದ್ದಾರೆ.

Advertisement

ಭಾರತೀಯ ಸಂಸ್ಕ್ರತಿಯಲ್ಲಿ ಯೋಗಕ್ಕೆ ಪ್ರಧಾನ್ಯತೆ ನೀಡಲಾಗಿದೆ. ಪುರಾತನ ಕಾಲದಲ್ಲಿ ಋಷಿ ಮುನಿಗಳು ಯೋಗ ಪ್ರಾಣಾಯಮಗಳನ್ನು ಮಾಡುವುದರ ಮೂಲಕ ತಮ್ಮ‌ ತಮ್ಮ ಆರೋಗ್ಯವನ್ನು ವ್ರದ್ದಿಸಿಕೊಳ್ಳುತ್ತಿದ್ದರು. ಈಗಿನ ಕಾಲಘಟ್ಟದಲ್ಲಿಯೂ  ಯೋಗ ಸಾಮಾಜದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡು ಯೋಗಕ್ಕೆ ಬೇಡಿಕೆ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆಯನ್ನು‌ ಆಚರಿಸಲು ಕರೆ ನೀಡುವುದರ ಮೂಲಕ ಇಂದು ಯೋಗ ವಿಶ್ವಮಾನ್ಯ ಮಾಡಿದ್ದಾರೆ.

ಯೋಗದಲ್ಲಿ ಮುಖ್ಯವಾಗಿ ಪ್ರಾಣಾಯಮಗಳನ್ಬು ಮಾಡಿದರೆ ಹೆಚ್ಚು ಸಹಕಾರಿಯಾಗಬಲ್ಲದು ಎಂದು ಹೇಳುವ ಸ್ವಾಮೀಜಿಯವರು ಉಜ್ಜೆಯಿ ಪ್ರಾಣಾಯಮ,ಭಸ್ತಿಕ ಪ್ರಾಣಾಯಮ  ಮಾಡಬೇಕು ಎಂದು ಸ್ವಾಮಿಜಿಯವರು ಅಭಿಪ್ರಾಯಪಡುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ನಿತ್ಯ ಯೋಗದಲ್ಲಿ ತೊಡಗಿಸಿಕೊಂಡವರಿಗೆ ರೋಗ ಬಹು ಬೇಗ ಬರುವುದಿಲ್ಲ ಎಂದು ಅವರು ಹೇಳುತ್ತಾರೆ.

ಆಶ್ರಮದಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು  ಉಚಿತ ತರಬೇತಿ ಮಾಹಿತಿ ನೀಡಲು ಸ್ವಾಮೀಜಿಯವರು  ಬಯಸಿದ್ದಾರೆ.

ಮೂಲತ ಶಿಕ್ಷಕರಾಗಿದ್ದ ಸ್ವಾಮಿಜೀಯವರು ತನ್ನ ಮನ ಪರಿವರ್ತನೆಗೊಂಡು ಸನ್ಯಾಸ ದೀಕ್ಷೆಯೊಂದಿಗೆ ಆಧ್ಯಾತ್ಮಿಕ ಕಡೆಗೆ  ಒಲವು ತೋರಿ ಸಮಾಜ ಮತ್ತು ದೇಶ ಸೇವೆಯತ್ತ ತನ್ನ ಗಮನ‌ ಹರಿಸಿದರು. ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ನೂರಾರು ಜನರಿಗೆ ಯೋಗ ತರಗತಿಗಳನ್ನು ನಡೆಸಿ ಯೋಗ ತರಬೇತಿ ನೀಡಿದ್ದಾರೆ. ಈಗ  80ನೇ ಹರೆಯಲ್ಲಿರುವ ಸ್ವಾಮಿಜೀಯವರು ತನ್ನ ಆಶ್ರಮದಲ್ಲಿ ನಿತ್ಯ ಯೋಗ ಪ್ರಾಣಾಯಮಗಳನ್ನು ಮಾಡುವುದರ ಮೂಲಕ ಆರೋಗ್ಯವಂತರಾಗಿದ್ದಾರೆ.

Advertisement

ಯೋಗದ ಬಗ್ಗೆ ತರಬೇತಿ ಮತ್ತು ಮಾಹಿತಿ ಪಡೆದುಕೊಳ್ಳುವವರು ಸ್ವಾಮಿಜಿಯವರ ದೂರವಾಣಿ ಸಂಖ್ಯೆ 8197149323 ಇದನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next