Advertisement

ಉದ್ಯಮ ಸ್ಥಾಪನೆಗೆ ಮುಕ್ತ ಸ್ವಾಗತ

06:15 AM Jul 08, 2018 | |

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆಯ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ಹೂಡಿಕೆ ದಾರರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಇನ್ಫೋಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ನೇತೃತ್ವದಲ್ಲಿ ತಮ್ಮನ್ನು ಭೇಟಿ ಮಾಡಿದ ಭಾರತೀಯ ಕೈಗಾರಿಕಾ ಒಕ್ಕೂಟದ ನಿಯೋಗದ ಜತೆ ಚರ್ಚಿಸಿದ ನಂತರ ಮಾತನಾಡಿದ ಅವರು, ಈಗಾಗಲೇ ಆಯವ್ಯಯದಲ್ಲಿ ಮಂಡಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇರೆ, ಬೇರೆ ಉತ್ಪನ್ನಗಳ ತಯಾರಿಕಾ ವಲಯ ಸ್ಥಾಪಿಸಲು ಉದ್ದೇಶಿಸಿದ್ದು, ಸರ್ಕಾರ ಹೂಡಿಕೆದಾರರನ್ನು ಮುಕ್ತ ಮನಸ್ಸಿನಿಂದ ಆಹ್ವಾನಿಸುತ್ತದೆ.

ಬಂಡವಾಳ ಹೂಡಿಕೆದಾರರು ಸರ್ಕಾರದ ಅನುಮತಿಗಾಗಿ ವಿವಿಧ ಇಲಾಖೆಗಳ ಬಾಗಿಲು ತಟ್ಟುವುದನ್ನು ತಪ್ಪಿಸಲು ನನ್ನ ಕಚೇರಿಯಲ್ಲಿಯೇ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ, ಕೈಗಾರಿಕಾ ಒಕ್ಕೂಟವು ರಾಜ್ಯದಲ್ಲಿ ಹೊಂದಿರುವ ಹೂಡಿಕೆಯ ಯೋಜನೆಗಳ ಕುರಿತು ಮೂರು ವಾರದಲ್ಲಿ ಮಾಹಿತಿ ನೀಡುವುದಾಗಿ ಸಿಐಐ ಪದಾಧಿಕಾರಿಗಳು ತಿಳಿಸಿದರು. ಜುಲೈ 12ರಂದು ನಡೆಯಲಿರುವ ಇಂಡಿಯಾ ಇನೋವೇಷನ್‌ ಸಮ್ಮಿಟ್‌ಗೆ ಸಿಎಂಗೆ ಆಹ್ವಾನ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next