Advertisement
ಇಂತಹ ಸಂದರ್ಭದಲ್ಲಿ ನೀರು ಬತ್ತಿಹೋಗಿ ಮುಂದೆ ತಮ್ಮ ಅಗತ್ಯಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣದಿಂದ ನೀರಿದ್ದವರೂ ಇಲ್ಲದವರಿಗೆ ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇಲ್ಲೊಬ್ಬರು ಉಚಿತವಾಗಿ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಪೂರೈಸಿ ಮಾದರಿಯಾಗಿದ್ದಾರೆ.
ಯಾರು ಎಷ್ಟು ನೀರು ಬೇಕಾದರೂ ತೆಗೆಯ ಬಹುದು. ನೀರು ಕೇಳಿದರೆ, ಹೆಚ್ಚು ತೆಗೆದೆವೆಂದು ಆರೋಪಿಸುವರೆಂಬ ಭಯವೂ ಇಲ್ಲಿಲ್ಲ.
Related Articles
Advertisement
ಹೆಸರಿಗಾಗಿ, ದುಡ್ಡಿಗಾಗಿ ಹೋರಾಡುವ ಈ ಸಮಾಜದಲ್ಲು ನಿಸ್ವಾರ್ಥ ಭಾವದಿಂದ ಅದೆಷ್ಟೋ ಜೀವಗಳಿಗೆ ಆಸರೆಯಾಗುವ ಇವರು ಮೂರು ವರ್ಷಗಳ ಹಿಂದೆ ನವಂಬರ್-ಡಿಸೆಂಬರ್ ತಿಂಗಳಲ್ಲೇ ನೀರಿಗಾಗಿ ಇಲ್ಲಿನ ಜನರು ಕಷ್ಟಪಡುವಂತಾಗಿತ್ತು. ಆ ಸಂದರ್ಭದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಟ್ಯಾಂಕ್‌ಲ್ಲಿ ನೀರು ತುಂಬಿ ಇಟ್ಟಾಗ ಅದು ಹಲವಾರು ಮಂದಿಗೆ ನೆರವಾಯಿತು. ಹಾಗಾಗಿ ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರೆಸಿದೆ. ಎಂದು ಅಭಿಪ್ರಾಯಪಡುತ್ತಾರೆ.
ಇಂತಹ ಮಾದರಿ ಕಾರ್ಯವನ್ನು ನಮ್ಮ ನಡುವೆ ಇರುವ ಯುವ ಸಂಘಟನೆಗಳು, ಸಮಾಜ ಸೇವಾ ಘಟಕಗಳೂ ಎಚ್ಚೆತ್ತು ಕೊಂಢೂ ನೀರು ಸಂಗ್ರಹ ಮತ್ತು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಜಿಲ್ಲೆಯ ಮೂಲೆಮೂಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ.
ಶ್ಲಾಘನೀಯನೀರು ಸಾರ್ವಜನಿಕ ಆಸ್ತಿ. ಅದನ್ನು ಹಂಚಿಕೊಂಡು ಬದುಕಿದಾಗ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಇದನ್ನೇ ಸೂರಂಬೆ„ಲಿನ ಖಾಸಗಿ ವ್ಯಕ್ತಿಯೊಬ್ಬರು ಮಾಡುತ್ತಿರುವುದು ಮಾದರಿ ಹಾಗೂ ಶ್ಲಾಘನೀಯ.
ದುಡ್ಡಿಗಾಗಿ ನೀರಿನ ಮಾರಾಟ ಸಲ್ಲದು. ಮಾರುಕಟ್ಟೆಗಳಲ್ಲಿ ಬಾಟಲಿಗಳಲ್ಲಿ ಕುಡಿಯುವ ನೀರು ಧಾರಾಳವಾಗಿ ಲಭಿಸುತ್ತದೆ. ಸರಕಾರ ಇಂತಹ ಕಂಪೆನಿಗಳಿಗೆ ಸಬ್ಸಿಡಿ ನೀಡಿ ಪೊÅàತ್ಸಾಹಿಸುವ ಬದಲು ಕೋಟಿಗಟ್ಟಲೆ ಲೀಟರು ನೀರನ್ನು ಜನರಿಗೆ ಉಚಿತವಾಗಿ ಲಭಿಸುವಂತೆ ಮಾಡುವ ಕ್ರಮ ಕೈಗೊಂಡಲ್ಲಿ ನೀರಿನ ಹಾಗೂ ಪ್ಲಾಸ್ಟಿಕ್ ಬಾಟಲಿಗಳಿಂದ ಉಂಟಾಗುವ ತ್ಯಾಜ್ಯ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ
-ರಾಜು ಕಿದೂರು, ಸ್ಥಳೀಯರು.
- ವಿದ್ಯಾಗಣೇಶ್ ಅಣಂಗೂರು