Advertisement

ಜನರಿಗೆ ಉಚಿತ ನೀರು; ಸಾರ್ಥಕ ಸೇವೆ

02:17 PM Jun 19, 2019 | Suhan S |

ಹುಬ್ಬಳ್ಳಿ: ಇಲ್ಲಿನ ಕೊಯಿನ್‌ ರಸ್ತೆಯ ಹುಬ್ಬಳ್ಳಿ ಕೋ ಆಪರೇಟಿವ್‌ ಆಸ್ಪತ್ರೆ ಮುಂಭಾಗದಲ್ಲಿ ಮೂರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ದೇಸಾಯಿ ಎಂಟರ್‌ಪ್ರೈಸಸ್‌ನವರು ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ನೀಡುತ್ತಿದ್ದಾರೆ.

Advertisement

ನಗರದ ಮಹಾನಗರ ಪಾಲಿಕೆ ಈಜುಕೊಳ ಬಳಿಯಲ್ಲಿರುವ ಸಂಸ್ಥೆಯಿಂದ ನೀರಿನ ಸೇವೆ ನಡೆದಿದ್ದು, ಕೊಯಿನ್‌ ರಸ್ತೆ ಹಾಗೂ ಈಜುಕೊಳ ಕಟ್ಟಡದ ಬಳಿ ಸಾರ್ವಜನಿಕರಿಗೆ ಇಡೀ ವರ್ಷ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಕೊಯಿನ್‌ ರಸ್ತೆಯಲ್ಲಿ ಆಸ್ಪತ್ರೆ, ಚಿತ್ರಮಂದಿರಗಳು, ವಾಣಿಜ್ಯ ಮಳಿಗೆಗಳು ಹೆಚ್ಚಾಗಿದ್ದು, ಜನದಟ್ಟಣೆಯಿಂದ ಕೂಡಿರುತ್ತದೆ. ಇಂತಹ ಸ್ಥಳದಲ್ಲಿ ನೀರಿನ ಸೇವೆ ನೀಡುವ ಮೂಲಕ ದೇಸಾಯಿ ಎಂಟರ್‌ಪ್ರೈಸಸ್‌ನವರು ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ತಾಜ್‌ನಗರದ ನಿವಾಸಿ ರಾಮಪ್ಪ ಬಡಿಗೇರ ಎನ್ನುವವರಿಗೆ ವೇತನ ನೀಡಿ ಸಾರ್ವಜನಿಕರಿಗೆ ನೀರು ನೀಡಲು ನೇಮಕ ಮಾಡಿದ್ದಾರೆ. ಪ್ರತಿದಿನ ಬೇಸಿಗೆಯಲ್ಲಿ ಸುಮಾರು 50ರಿಂದ 60 ಕೊಡ ಕುಡಿಯುವ ನೀರು ಬೇಕಾದರೆ, ಚಳಿಗಾಲ-ಮಳೆಗಾಲದಲ್ಲಿ ಸುಮಾರು 20-30 ಕೊಡ ನೀರು ಬೇಕಾಗುತ್ತದೆ. ಇದಕ್ಕಾಗಿ ದೇಸಾಯಿ ಎಂಟರ್‌ಪ್ರೈಸಸ್‌ನವರು ಹಣ ಸಂದಾಯ ಮಾಡುವ ಮೂಲಕ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next