Advertisement
2 ದಿನಗಳ ಛತ್ತೀಸ್‌ಗಢ ಪ್ರವಾಸದ ಲ್ಲಿರುವ ಅವರು ರವಿವಾರ ರಾಜನಂದ ಗಾಂವ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸನ್ನು ನೀವು ಮತ್ತೂಮ್ಮೆ ಆಶೀರ್ವದಿಸಿ. ಕಾಂಗ್ರೆಸ್ ಯಾವತ್ತೂ ಬಡವರು, ಕಾರ್ಮಿಕರು, ರೈತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ದಲಿತರ ಏಳ್ಗೆಗಾಗಿ ಕೆಲಸ ಮಾಡುತ್ತದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕೇವಲ ಅದಾನಿಯಂಥ ಕೋಟ್ಯಧಿಪತಿ ಉದ್ಯಮಿಗಳಿಗಾಗಿ ಮಾತ್ರವೇ ಕೆಲಸ ಮಾಡುತ್ತದೆ ಎಂದರು. ಕೇಂದ್ರದಲ್ಲೂ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ದೇಶಾದ್ಯಂತ ಜಾತಿ ಗಣತಿ ನಡೆಸುತ್ತೇವೆ ಎಂಬ ಭರವಸೆಯನ್ನೂ ಅವರು ನೀಡಿದರು.
ನಾನು ಕೂಡ ಒಬ್ಬ ಒಳ್ಳೆಯ ಹಿಂದೂ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾನೂ 1.11 ಲಕ್ಷ ರೂ. ದೇಣಿಗೆ ನೀಡಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಭೋಪಾಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ. ನಾನೊಬ್ಬ ಒಳ್ಳೆಯ ಹಿಂದೂ. ಆದರೆ ಚುನಾವಣೆಯಲ್ಲಿ ಧರ್ಮವನ್ನು ಬಳಸಬಾರದು. ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ನಾಯಕರಾದ ಸಿಎಂ ಶಿವರಾಜ್ ಸಿಂಗ್ 1 ಲಕ್ಷ ರೂ. ಕೊಟ್ಟರು, ನಾನು 1.11 ಲಕ್ಷ ರೂ. ಕೊಟ್ಟಿದ್ದೇನೆ. ಚೆಕ್ ಅನ್ನು ನೇರವಾಗಿ ಪ್ರಧಾನಿ ಮೋದಿಯವರಿಗೇ ಕಳುಹಿಸಿಕೊಟ್ಟಿದ್ದೆ ಎಂದಿದ್ದಾರೆ. ಇದೇ ವೇಳೆ ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಕಮಲ್‌ನಾಥ್ ನಡುವೆ ಒಳಜಗಳ ತೀವ್ರಗೊಂಡಿದೆ ಎಂಬ ಸುದ್ದಿಗಳನ್ನು ಸಿಂಗ್ ತಳ್ಳಿಹಾಕಿದ್ದಾರೆ.
Related Articles
Advertisement