Advertisement

ಸ್ಮರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

02:39 PM Aug 03, 2019 | Suhan S |

ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಡವರು ತರಬೇತಿ ಪಡೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಇಂತಹ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೆ.ಆರ್‌.ಪುರಂನಲ್ಲಿರುವ ಇಂಡಿಯನ್‌ ಐಎಎಸ್‌ ಆ್ಯಂಡ್‌ ಕೆಎಎಸ್‌ ಕೋಚಿಂಗ್‌ ಅಕಾಡೆಮಿ ಯಿಂದ ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಮೂರು ತಿಂಗಳವರೆಗೆ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಅಕಾಡೆಮಿ ಸಂಯೋಜಕ ಭಾಸ್ಕರ ರೆಡ್ಡಿ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಆಸಕ್ತ ಬಡ, ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಎಸ್‌, ಐಎಎಸ್‌, ಎಫ್ಡಿಎ, ಪಿಡಿಒ, ಆರ್‌.ಆರ್‌.ಬಿ. ಹಾಗೂ ಬ್ಯಾಕಿಂಗ್‌ ಸೇರಿದಂತೆ ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಸುಮಾರು 100 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆ.6ರಿಂದ ತರಬೇತಿಯ ನೂತನ ಬ್ಯಾಚ್‌ಗಳು ಆರಂಭವಾಗಲಿವೆ. ಅಭ್ಯರ್ಥಿಗಳು ಇಂದಿನಿಂದಲೇ ಬೆಂಗಳೂರಿನಲ್ಲಿರುವ ಕೆ.ಆರ್‌.ಪುರಂನಲ್ಲಿರುವ ಅಕಾಡೆಮಿಗೆ ಭೇಟಿ ನೀಡಿ ಪ್ರವೇಶ ಪಡೆಯ ಬಹುದಾಗಿದೆ. ನುರಿತ ಬೋಧಕರಿಂದ ವಿಷಯವಾರು ತರಗತಿ ನಡೆಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಪ್ರತಿ ವಾರ ಟೆಸ್ಟ್‌ ಸಿರೀಸ್‌ ನಡೆಸುವುದರ ಮೂಲಕ ಪರೀಕ್ಷೆ ಎದುರಿಸುವ ಭಯ ದೂರ ಮಾಡಲಾಗುವುದು ಎಂದು ಹೇಳಿದರು. ಅಕಾಡೆಮಿ ನಿರ್ದೇಶಕಿ ಕೆ.ಆರ್‌. ಕಲಾ ಮಾತನಾಡಿ, ಅಕಾಡೆಮಿಯು ಉತ್ತಮ ಗ್ರಂಥಾಲಯ ಹಾಗೂ ವೈಫೈ ಸೌಲಭ್ಯ ಹೊಂದಿದ್ದು, ತರಗತಿ ಮುಗಿದ ಬಳಿಕ ಅಭ್ಯರ್ಥಿಗಳು ಗ್ರಂಥಾಲಯದಲ್ಲೇ ಅಭ್ಯಾಸ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಾಹಿತಿಗೆ 9108440145, 9108440146 ಗೆ ಸಂಪರ್ಕಿಸ ಬಹುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next