ರಾಮನಗರ: ಬಿಡದಿ ಟೌನ್‌ಶಿಪ್‌ಗೆ ಗುರುತಿಸಲಾಗಿರುವ ಎಲ್ಲಾ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಿ, ಇಲ್ಲವೇ ರೆಡ್ ಜೋನ್‌ನಿಂದ ಹೊರಗೆ ತನ್ನಿ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಎಂಎಲ್‌ಸಿ ಸಿ.ಎಂ. ಲಿಂಗಪ್ಪರ ನಿಯೋಗ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಆಹ್ವಾನದ ಮೇರೆಗೆ ನಿಯೋಗ ತೆರಳಿತ್ತು. ಈ ವೇಳೆ ಈ ಮಾಜಿ ಶಾಸಕರು ಮನವಿ ಸಲ್ಲಿಸಿ ರೈತರನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ 2006 ರಲ್ಲಿ ನೋಟಿಫಿಕೇಷನ್ ಆಗಿದೆ. ಟೌನ್‌ಶಿಪ್ ಅಭಿವೃದಿಟಛಿ ಡಿಎಲ್‌ಎಫ್ ಎಂಬ ಸಂಸ್ಥೆಗೆ ಅನು ಮತಿ ಕೊಡಲಾಗಿತ್ತು. ಬಿಡದಿ ಹೋಬಳಿಯಲ್ಲಿ 9,600 ಎಕರೆ ಭೂಮಿ ಗುರುತಿಸಲಾಗಿದೆ. ಇಲ್ಲಿ ಬೇರಾವ ಚಟುವಟಿಕೆಗಳಿಗೂ ಸಾಧ್ಯ ವಾಗದಂತೆ ಸರ್ಕಾರ ರೆಡ್ ಜೋನ್ ಎಂದು ವರ್ಗ ಮಾಡಿದೆ. ಆದರೆ ಟೌನ್‌ಶಿಪ್ ಆಗಲೇ ಇಲ್ಲ.
ಹೀಗಾಗಿ ಕಳೆದ 14 ವರ್ಷಗಳಿಂದಲೂ ಈ ಭಾಗದ ರೈತರು ತಮ್ಮ ಭೂಮಿ ಮಾರಲು ಆಗದೆ, ಅಭಿವೃದಿಟಛಿ ಮಾಡಲೂ ಆಗದೆ ಪರಿತಪಿಸುತ್ತಿದ್ದಾರೆ. ಈ ಮಧ್ಯೆ 9,600 ಎಕರೆ ಪೈಕಿ ಕೇವಲ 1,100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿದೆ. ಯಾರೋ ಒಬ್ಬ ಉದ್ಯಮಿಗೆ ಅನುಕೂಲ ಮಾಡಿಕೊಡಲು ಉಳಿದ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಮುಖಂ ಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಪತ್ರಿಕೆಯೊಂದಿಗೆ ಮಾಜಿ ಶಾಸಕ ಎಚ್.ಸಿ. ಬಾಲಕರಷ್ಣ ಮಾತನಾಡಿ, 2006ರಲ್ಲಿ ಟೌನ್‌ಶಿಪ್‌ಗೆ ಅಧಿಸೂಚನೆ ಹೊರಟಾಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದರು. ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯ ಮಂತ್ರಿಯಾಗಿದ್ದರ. ಹೀಗಾಗಿ ಮುಖ್ಯ ಮಂತ್ರಿಗಳಿಗೆ ಈ ವಿಚಾರದಲ್ಲಿ ಮಾಹಿತಿಯಿದೆ. ಒಂದೊಮ್ಮೆ 1,100 ಎಕರೆ ಭೂಮಿಯನ್ನು ಮಾತ್ರ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿ ಕೊಳ್ಳುವುದಾದರೆ ಮೊದಲು ಅಧಿಸೂಚನೆ ವಜಾಗೊಳಿಸಿ,
ಕೆಂಪು ವಲಯದಿಂದ ಕೃಷಿ ವಲಯಕ್ಕೆ ಪರಿವರ್ತಿಸಿ ನಂತರ ಅನ್ಯ ಉದ್ದೇಶಕ್ಕೆ ಭೂಸ್ವಾಧೀನ ಪ್ರಕ್ರಿಯೆ ಮಾಡಿ ಎಂದು ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ. ರೈತಪರ ಕಾಳಜಿಯುಳ್ಳ ಸೂಕ್ಷ್ಮ ಸಂವೇದಿ ಸಿಎಂ ಆಗಿರುವ ಮುಖ್ಯಮಂತ್ರಿಗಳು ಬಿಡದಿ ಟೌನ್‌ಶಿಪ್‌ಗೆ ಗುರುತಿಸಿರುವ ಎಲ್ಲಾ ಭೂಮಿ ಯನ್ನು ಇಂದಿನ ದರವನ್ನು ನಿಗದಿಪಡಿಸಿ ಸಂಪೂರ್ಣವಾಗಿ ಭೂ ಸ್ವಾಧೀನಪಡಿಸಿ ಕೊಳ್ಳಿ ಎಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.