Advertisement

ತಣ್ಣೀರುಬಾವಿಯಲ್ಲಿ ಮುಕ್ತ ಸರ್ಫಿಂಗ್‌ ಸ್ಪರ್ಧೆ

11:53 PM Mar 07, 2021 | Team Udayavani |

ತಣ್ಣೀರುಬಾವಿ: ಮಂಗಳೂರು ಸರ್ಫಿಂಗ್‌ ಕ್ಲಬ್‌ ವತಿಯಿಂದ ಮುಕ್ತ ಸರ್ಫಿಂಗ್‌ ಸ್ಪರ್ಧೆ ರವಿವಾರ ತಣ್ಣೀರುಬಾವಿಯಲ್ಲಿ ಜರಗಿತು.

Advertisement

ಸುಮಾರು 7 ಸರ್ಫಿಂಗ್‌ ಕ್ಲಬ್‌ಗಳ 70ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. 12, 16, 20 ಮತ್ತು 20 ವರ್ಷಕ್ಕಿಂತ ಮೇಲ್ಪಟ್ಟ ಪುರುಷ, ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ಜರಗಿತು. ಇದರ ಜತೆಗೆ ಯೋಗ ಶಿಬಿರ, ಕಲಾ ಶಿಬಿರ ಆಯೋಜಿಸಲಾಗಿತ್ತು.

ಮಂಗಳೂರಿನಲ್ಲಿ ಮುಕ್ತ ಸರ್ಫ್‌ ಸ್ಪರ್ಧೆಯನ್ನು ಪ್ರಥಮವಾಗಿ ಆಯೋಜಿಸಲಾಗಿತ್ತು. ಕೋವಿಡ್‌ ಬಳಿಕ ನಡೆಯುತ್ತಿರುವ ಪ್ರಥಮ ಬೃಹತ್‌ ಸ್ಪರ್ಧಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಉತ್ಸಾಹದಲ್ಲಿ ಪಾಲ್ಗೊಂಡರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೋಸ್ಟ್‌ಗಾರ್ಡ್‌ ಡಿಐಜಿ ವೆಂಕಟೇಶ್‌, ನವಮಂಗಳೂರು ಬಂದರಿನ ಉಪಾಧ್ಯಕ್ಷ ಕೆ.ಜಿ.ನಾಥ್‌, ಯುವಜನ ಕ್ರೀಡಾ ಇಲಾಖೆಯ ರಘುವೀರ್‌ ಸೂಟರ್‌ಪೇಟೆ, ದರ್ತಿ ಸಂಸ್ಥೆಯ ಎಂಡಿ ಶಹೀದ್‌ಖಾನ್‌, ಯೋಜಕ ಸಂಸ್ಥೆಯ ಎಂಡಿ ಜಗದೀಶ್‌ ಬೋಳೂರು, ಮೇಯರ್‌ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯೆ ಸುನಿತಾ, ಸರ್ಫಿಂಗ್‌ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next