Advertisement

India-Myanmar ಗಡಿಯಲ್ಲಿ ಮುಕ್ತಸಂಚಾರ ರದ್ದು

08:11 PM Feb 08, 2024 | Team Udayavani |

ನವದೆಹಲಿ: ದೇಶದ ಆಂತರಿಕ ಭದ್ರತೆಯ ಹಿತಾಸಕ್ತಿಗಾಗಿ, ಭಾರತ ಹಾಗೂ ಮ್ಯಾನ್ಮಾರ್‌ ನಡುವಿನ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಒಪ್ಪಂದ (ಎಫ್ಎಂಆರ್‌)ವನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಕೇಂದ್ರಸರ್ಕಾರ ಗುರುವಾರ ತಿಳಿಸಿದೆ. ಈ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದು, “ದೇಶದ ಆಂತರಿಕ ಭದ್ರತೆಯನ್ನು ಖಾತರಿ ಪಡಿಸಿಕೊಳ್ಳುವುದರ ಜತೆಗೆ ಈಶಾನ್ಯ ರಾಜ್ಯಗಳ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಮ್ಯಾನ್ಮಾರ್‌ ಗಡಿಯಲ್ಲಿ ಎಫ್ಎಂಆರ್‌ ಅನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದು ದೇಶದ ಗಡಿಗಳನ್ನು ಭದ್ರಪಡಿಸಲು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ’ ಎಂದಿದ್ದಾರೆ.

Advertisement

ಭಾರತ ಹಾಗೂ ಮ್ಯಾನ್ಮಾರ್‌ ಗಡಿ ಭಾಗದಲ್ಲಿ ವಾಸಿಸುವ ಜನರು ಎರಡೂ ದೇಶಗಳ 16 ಕಿ.ಮೀ. ದೂರಗಳವರೆಗೆ ಯಾವುದೇ ದಾಖಲೆಗಳಿಲ್ಲದೇ (ವೀಸಾ, ಪಾಸ್‌ಪೋರ್ಟ್‌) ಸಂಚರಿಸಲು ಎಫ್ಎಂಆರ್‌ ಅನುಮತಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಣಯಕ್ಕೆ ಮಣಿಪುರ ಸಿಎಂ ಎನ್‌.ಬಿರೇನ್‌ ಸಿಂಗ್‌ ಧನ್ಯವಾದ ತಿಳಿಸಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು ಗಡಿಭದ್ರತೆ ಬಗ್ಗೆ ಹೊಂದಿರುವ ಬದ್ಧತೆಗೆ ಕೃತಜ್ಞನಾಗಿದ್ದೇನೆ. ಈ ನಿರ್ಣಯವು ಅಕ್ರಮ ವಲಸೆಯನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next