Advertisement

ಅಂಗನವಾಡಿ ಸಹಾಯಕಿಯಿಂದ ಕ್ವಾರಂಟೈನ್‌ ಮಕ್ಕಳಿಗೆ ಉಚಿತ ಹಾಲು

10:43 PM May 27, 2020 | mahesh |

ಕುಂದಾಪುರ: ಕ್ವಾರಂಟೈನ್‌ ಕೇಂದ್ರವೆಂದರೆ ವಿರೋಧಿಸುವ ಜನರ ಮಧ್ಯೆ ಇಲ್ಲೊಬ್ಬರು ಅಂಗನವಾಡಿ ಸಹಾಯಕಿ ಅಲ್ಲಿರುವ ಪುಟ್ಟ ಪುಟ್ಟ ಮಕ್ಕಳ ಸಂಕಷ್ಟವನ್ನು ಅರಿತು ಪ್ರತಿ ನಿತ್ಯ ಉಚಿತವಾಗಿ ಕ್ವಾರಂಟೈನ್‌ ಕೇಂದ್ರಕ್ಕೆ ಹಾಲು ಪೂರೈಸುತ್ತಿದ್ದಾರೆ. ಕೋಡಿಯ ನಿವಾಸಿ, ಕುಂದಾಪುರದ ಮಹಾತ್ಮಾ ಗಾಂಧಿ ಪಾರ್ಕಿನಲ್ಲಿರುವ ಅಂಗನವಾಡಿ ಯಲ್ಲಿ ಸಹಾಯ ಕಿಯಾಗಿ ಕೆಲಸ ಮಾಡುತ್ತಿರುವ ರಾಧಾ ಅವರು ಪ್ರತಿ ದಿನ ಬೆಳಗ್ಗೆ ಕುಂದಾಪುರದಲ್ಲಿರುವ ಕ್ವಾರಂಟೈನ್‌ ಕೇಂದ್ರವೊಂದಕ್ಕೆ ಹಾಲು ನೀಡಿ ಬರುತ್ತಿದ್ದಾರೆ.

Advertisement

ಇಲ್ಲಿನ ಈ ಕ್ವಾರಂಟೈನ್‌ ಕೇಂದ್ರದಲ್ಲಿ ಹೊರ ರಾಜ್ಯ ಹಾಗೂ ವಿದೇಶದಿಂದ ಬಂದಿರುವ ಜನರೊಂದಿಗೆ 5 ವರ್ಷದೊಳಗಿನ ಐವರು ಮಕ್ಕಳಿದ್ದು, ಅವರಿಗೆ ಆಗಾಗ ಹಾಲು ಕೊಡಬೇಕಾಗುತ್ತದೆ. ಅದಕ್ಕಾಗಿ ಈ ಅಂಗನವಾಡಿ ಸಹಾಯಕಿ ಮನೆಯಿಂದಲೇ ತಾವೇ ಸ್ವತಃ ಉಚಿತವಾಗಿ ಹಾಲು ಕೊಟ್ಟು ಬರುವ ಮೂಲಕ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಿದ್ದಾರೆ.

ರಾಧಾ ಅವರಿಗೆ ತಮ್ಮ ಮನೆಯಿರುವ ಕೋಡಿಯಿಂದ ಕುಂದಾಪುರದ ಈ ಕ್ವಾರಂಟೈನ್‌ ಕೇಂದ್ರಕ್ಕೆ ಸುಮಾರು 5 ಕಿ.ಮೀ. ಅಂತರವಿದ್ದು, ಸದ್ಯ ಬಸ್‌ಗಳ ವ್ಯವಸ್ಥೆಯಿಲ್ಲದೆ ಇರುವುದರಿಂದ ಕುಂಭಾಶಿಯ ನಿವೇದಿತಾ ಅನ್ನುವ ಹುಡುಗಿಯ ಸಹಾಯದೊಂದಿಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ.

ಗೌರವದಿಂದ ಕಾಣುತ್ತಾರೆ
ಚಿಕ್ಕ ಮಕ್ಕಳಿಗೆ ಹಾಲು ಅಗತ್ಯ ಹಾಗೂ ಅನಿವಾರ್ಯವಾಗಿದ್ದು, ಕಳೆದ ಶುಕ್ರವಾರದಿಂದ ಹಾಲು ನೀಡುತ್ತಿದ್ದೇನೆ. ಈ ಮಕ್ಕಳು ಕ್ವಾರಂಟೈನ್‌ ಕೇಂದ್ರದಲ್ಲಿರುವವರೆಗೆ ಹಾಲು ಕೊಡಬೇಕು ಅಂದುಕೊಂಡಿದ್ದೇನೆ. ಬಸ್‌ ವ್ಯವಸ್ಥೆ ಇಲ್ಲದ ಕಾರಣ ಮೊದಲು ಕಷ್ಟವೆಂದು ಭಾವಿಸಿದ್ದೆ. ಆದರೆ ಕುಂಭಾಶಿಯಿಂದ ನಿವೇದಿತಾ ಅನ್ನುವ ಹುಡುಗಿ ದ್ವಿಚಕ್ರ ವಾಹನದಲ್ಲಿ ಇಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಸುಲಭವಾಗುತ್ತಿದೆ. ಅಲ್ಲಿರುವ ಎಲ್ಲರೂ ಈಗ ಅತೀವ ಪ್ರೀತ್ಯಾದರ, ಗೌರವದಿಂದ ಕಾಣುತ್ತಿದ್ದಾರೆ.
-ರಾಧಾ ಕೋಡಿ, ಅಂಗನವಾಡಿ ಸಹಾಯಕಿ

Advertisement

Udayavani is now on Telegram. Click here to join our channel and stay updated with the latest news.

Next